ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಸೇನೆ ಯಿಂದ ಶೆಲ್ ದಾಳಿಗೊಳಗಾಗುವ ನಿವಾಸಿಗಳಿಗಾಗಿ ಸುಮಾರು 14,000ಕ್ಕೂ ಅಧಿಕ ಸಮುದಾಯ ಮತ್ತು ವಿಶೇಷ ಬಂಕರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಜಮ್ಮು (ಜ.08): ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಸೇನೆ ಯಿಂದ ಶೆಲ್ ದಾಳಿಗೊಳಗಾಗುವ ನಿವಾಸಿಗಳಿಗಾಗಿ ಸುಮಾರು 14,000ಕ್ಕೂ ಅಧಿಕ ಸಮುದಾಯ ಮತ್ತು ವಿಶೇಷ ಬಂಕರ್ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಪೂಂಚ್ ಮತ್ತು ರಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ಸುಮಾರು 7,278 ಬಂಕರ್ಗಳನ್ನು, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ 7,162 ಭೂಗತ ಬಂಕರ್ಗಳನ್ನು ಮತ್ತು ಸುಮಾರು 415.73 ಕೋಟಿ ರು. ವೆಚ್ಚದಲ್ಲಿ 13,029 ವಿಶೇಷ ಬಂಕರ್’ಗಳು ಮತ್ತು 1,431 ಸಮುದಾಯ ಬಂಕರ್ ನಿರ್ಮಿಸಲಾಗುತ್ತದೆ.
