ಯುದ್ಧಭೂಮಿಗಳಲ್ಲಿ ಅಡಗಿಸಿಡಲಾದ ನೆಲಬಾಂಬುಗಳನ್ನು ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವಿರುವ ಡ್ರೋನ್’ಗಳನ್ನು ಹರ್ಷವರ್ಧನ್ ವಿನ್ಯಾಸಗೊಳಿಸಿ ತಯಾರಿಸಿದ್ದಾನೆ.
ಗಾಂಧಿನಗರ (ಜ.13): ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರಂಟ್ ಗುಜರಾತ್ ಜಾಗತಿಕ ಮೇಳದಲ್ಲಿ 14ರ ಪೋರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾನೆ.
ಗುಜರಾತ್ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು 10ನೇ ತರಗತಿ ವಿದ್ಯಾರ್ಥಿಯಾಗಿರುವ ಹರ್ಷವರ್ಧನ್ ಝಾಲಾನೊಂದಿಗೆ ರೂ.5 ಕೋಟಿಯ ಒಪ್ಪಂದ ಮಾಡಿಕೊಂಡಿದೆ.
ಯುದ್ಧಭೂಮಿಗಳಲ್ಲಿ ಅಡಗಿಸಿಡಲಾದ ನೆಲಬಾಂಬುಗಳನ್ನು ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವಿರುವ ಡ್ರೋನ್’ಗಳನ್ನು ಹರ್ಷವರ್ಧನ್ ವಿನ್ಯಾಸಗೊಳಿಸಿ ತಯಾರಿಸಿದ್ದಾನೆ.