ಹೈದರಾಬಾದ್[ಡಿ.19] ಇದೊಂದು ಆಘಾತಕಾರಿ ಸುದ್ದಿ. ಹೈದರಾಬಾದ್‌ ಸಮೀಪದ ಮಾಧಾಪುರದಿಂದ ವರದಿಯಾಗಿದೆ. 14 ವರ್ಷದ ಬಾಲಕನೊಬ್ಬ ಸ್ನಾನ ಮಾಡುತ್ತಿದ್ದ ಯುವತಿಯ ಚಿತ್ರವನ್ನು ತನ್ನ ಟ್ಯಾಬ್ಲೆಟ್‌ನಲ್ಲಿ ಚಿತ್ರಿಸಲು ಮುಂದಾಗಿದ್ದು ಇದೀಗ ಪೊಲೀಸರ ವಶದಲ್ಲಿದ್ದಾನೆ.

ಮಾಧಾಪುರದ ಹಾಸ್ಟೇಲ್‌ನಲ್ಲಿ ಈ ಪ್ರಕರಣ ನಡೆದಿದೆ. 22 ವರ್ಷದ ಯುವತಿ ಸ್ನಾನಕ್ಕೆಂದು ಬಾತ್‌ರೂಂಗೆ ಇಳಿದಾಗ ತನ್ನನ್ನು ಯಾರೋ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡು ಹೌಹಾರಿದ್ದಾಳೆ. ತಕ್ಷಣ ಎಚ್ಚರಿಕೆ ಘಂಟೆ ಬಾರಿಸಿದ್ದು ಸಿಬ್ಬಂದಿ ಮತ್ತು ಜನರು ಒಟ್ಟಾಗಿ ಬಾಲಕನನ್ನು ಹಿಡಿದುಕೊಂಡಿದ್ದಾರೆ.

ಆಕೆ ಸ್ನಾನ ಮಾಡುವ ಫೋಟೋ ತೆಗೆದು ಮಂಚಕ್ಕೆ ಕರೆದ ದಾವಣಗೆರೆಯವನ ಕಥೆ..!

ಮಹಿಳೆಯರು ಮತ್ತು ಪುರುಷರ ಹಾಸ್ಟೇಲ್ ಅಕ್ಕ-ಪಕ್ಕದಲ್ಲಿದೆ.ಒಂದೇ ಕಟ್ಟಡದಲ್ಲಿ ವಾಸ್ತವ್ಯ ಮಾಡುವ ಅವಕಾಶ ನೀಡಲಾಗಿದ್ದು ಬಾಲಕ ಇದನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾನೆ. ಬಾಲಕನ ಟ್ಯಾಬ್ ಅನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಕೊಡಲಾಗಿದೆ.ಈ ಬಗೆಯ ಚಿತ್ರಗಳು ಮತ್ತು ವಿಡಿಯೋ ಎಲ್ಲಿಯಾದರೂ ಶೇರ್ ಆಗಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಡಿಸಿಪಿ ಎ. ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.