ಕಳೆದ ಅಕ್ಟೋಬರ್ ತಿಂಗಳ ಹಬ್ಬದ ಋತುವಿನಲ್ಲಿ ಪ್ರಾದೇಶಿಕ ವಿಮಾನದಲ್ಲಿ ಅತಿ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ.

ನವದೆಹಲಿ: ಕಳೆದ ಅಕ್ಟೋಬರ್ ತಿಂಗಳ ಹಬ್ಬದ ಋತುವಿನಲ್ಲಿ ಪ್ರಾದೇಶಿಕ ವಿಮಾನದಲ್ಲಿ ಅತಿ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ.

ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ದಾಖಲೆಗಳ ಪ್ರಕಾರ, ಕಳೆದ ತಿಂಗಳು ಪ್ರಾದೇಶಿಕ ವಿಮಾನಗಳಲ್ಲಿ 1.4 ಕೋಟಿ ಜನರು ಪ್ರಯಾಣಿಸಿದ್ದಾರೆ.

ತಿಂಗಳೊಂದರಲ್ಲಿ ಒಂದು ಕೋಟಿಗೂ ಅಧಿಕ ಮಂದಿ ವಿಮಾನದಲ್ಲಿ ಪ್ರಯಾಣಿಸಿರುವುದು ಎರಡನೇ ಬಾರಿಯಾಗಿದೆ. ಮೇ ತಿಂಗಳ ಬೇಸಿಗೆ ರಜೆಯಲ್ಲಿ 1.1 ಕೋಟಿ ಜನರು ವಿಮಾನದಲ್ಲಿ ಪ್ರಯಾಣಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಶೇ.20.5 ರಷ್ಟು ಏರಿಕೆಯಾಗಿದೆ.