ಬೆಂಗಳೂರು[ಸೆ. 06] ರಾಜ್ಯ ಸರ್ಕಾರ 14 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ. ಶುಕ್ರವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸೆಸಿಕಾಂತ್ ಸೆಂಥಿಲ್ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿ ಹೊರಹೋಗಿದ್ದರು.

ವರ್ಗಾವಣೆ ಎನ್ನುವುದಕ್ಕಿಂತ ಸ್ಥಳ ನಿಯೋಜನೆಗೆ ಕಾಯುತ್ತಿದ್ದವರಿಗೆ ಸ್ಥಾನ ಕಲ್ಪಿಸಿಕೊಡಲಾಗಿದೆ.  ಹಾಗಾದರೆ ಯಾವೆಲ್ಲ ಅಧಿಕಾರಿಗಳ ಸ್ಥಾನಪಲ್ಲಟ ಆಗಿದೆ? ಇಲ್ಲಿದೆ ಸಂಪೂರ್ಣ ವಿವರ

ಮಂಗಳೂರು: IAS ಸಸಿಕಾಂತ್ ಸೆಂಥಿಲ್ ರಾಜೀನಾಮೆ

1. ಡಾ ರಾಜಕುಮಾರ್ ಕತ್ರಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಿಕ್ಷಣ ಇಲಾಖೆ. [ಸ್ಥಳ ನಿಯೋಜನೆ]

2.  ಅಮ್ಲಾನ್ ಆದಿತ್ಯ ಬಿಸ್ವಾಸ್ - ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ. [ಸ್ಥಳ ನಿಯೋಜನೆ] ಆದಿತ್ಯ ಬಿಸ್ವಾಸ್ ಗೆ ಹೆಚ್ಚುವರಿಯಾಗಿ  ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾದೀನ ಆಯುಕ್ತರ ಹೊಣೆ.

3.  ಎ.ಬಿ.ಇಬ್ರಾಹಿಂ- ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ. [ಕರ್ನಾಟಕ ಮೂಲಭೂತ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು] 

5. ಸಿ.ಶಿಖಾ - ಎಂ.ಡಿ. ಬಿಎಂಟಿಸಿ, ಜತೆಗೆ ಕರ್ನಾಟಕ ಮೂಲಭೂತ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹೊಣೆಗಾರಿಕೆ [ಸ್ಥಳ ನಿಯೋಜನೆ]

6. ಸಲ್ಮಾ ಕೆ ಫಾಹಿಮ್  - ಎಂ.ಡಿ. ಹಟ್ಟಿ ಗೋಲ್ಡ್ ಮೈನ್ಸ್ [ಸ್ಥಳ ನಿಯೋಜನೆ]

7.  ಕೆ.ಜಿ.ಶಾಂತರಾಮ್  - ಕಾರ್ಮಿಕ ಇಲಾಖೆ ಆಯುಕ್ತರು. [ಕರ್ನಾಟಕ ಹೌಸಿಂಗ್ ಬೋರ್ಡ್ ಕಮಿಷನರ್ ಆಗಿದ್ದರು] 

8. ಅನಿರುದ್ಧ ಶ್ರವಣ್    - ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ.  [ಸ್ಥಳ ನಿಯೋಜನೆ]

9. ಹೆಬ್ಸಿಬಾ ರಾಣಿ ಕೊರ್ಲಪಟ್ಟಿ - ಎಂ.ಡಿ, ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೋರೇಷನ್. [ಸ್ಥಳ ನಿಯೋಜನೆ]

10. ಕೆ.ಶ್ರೀನಿವಾಸ    - ಆಯುಕ್ತರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ. [ಸ್ಥಳ ನಿಯೋಜನೆ]

11.  ಕೆ.ಲೀಲಾವತಿ- ನಿರ್ದೇಶಕರು, ವಿಕಲಚೇತನರ ಕಲ್ಯಾಣ ಇಲಾಖೆ. 

12.  ಡಾ.ಅರುಂಧತಿ ಚಂದ್ರಶೇಖರ್     - ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. 

13.  ಎಂ.ಆರ್.ರವಿಕುಮಾರ್        - ಎಂ.ಡಿ., ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ.

14.  ಎಂ.ಬಿ.ರಾಜೇಶ್ ಗೌಡ        - ಎಂ.ಡಿ. ಬೆಸ್ಕಾಂ