ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟ ಆರೋಪ ಎದುರಿಸುತ್ತಿರುವ ರವಿ ಬೆಳಗೆರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಡಿ.23 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೆಂಗಳೂರು (ಡಿ.11): ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟ ಆರೋಪ ಎದುರಿಸುತ್ತಿರುವ ರವಿ ಬೆಳಗೆರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಡಿ.23 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರವಿ ಬೆಳಗೆರೆಗೆ 1 ನೇ ಎಸಿಎಂಎ ಕೋರ್ಟ್ ನ್ಯಾಯಾಂಗ ಬಂಧನ ಆದೇಶ ನೀಡಿದೆ. ಜೈಲಿನಲ್ಲಿ ವೈದ್ಯಕೀಯ ಸೌಲಭ್ಯ ನೀಡುವಂತೆ ರವಿ ಬೆಳಗೆರೆ ಪರ ವಕೀಲ ದಿವಾಕರ್ ಕೋರ್ಟ್'ಗೆ ಮನವಿ ಮಾಡಿಕೊಂಡಿದ್ದಾರೆ.

ನ್ಯಾಯಾಲಯದ ಬಗ್ಗೆ, ತನಿಖೆ ಬಗ್ಗೆ ಬಹಳ ಗೌರವವಿದೆ. ಇಂಥ ತಪ್ಪಿಗೆ ಅಷ್ಟು ಬೇಗ ಜಾಮೀನು ಸಿಗುವುದಿಲ್ಲ ಎಂಬ ನಂಬಿಕೆಯಿದೆ. ತನಿಖೆ ನಡೆಯಲಿ. ಸೂಕ್ತ ನ್ಯಾಯ ಸಿಗಲಿ ಎಂಬುದೇ ನನ್ನ ಆಶಯ. ನಮ್ಮ ಬೆಂಗಳೂರು ಪೋಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತದೆ ಎಂದು ಸುನೀಲ್ ಹೆಗ್ಗರವಳ್ಳಿ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ರವಿ ಬೆಳಗೆರೆ ಪರಪ್ಪನ ಅಗ್ರಹಾರದತ್ತ ಹೊರಟಿದ್ದಾರೆ. 1 ನೇ ಎಸಿಎಂಎಂ ಕೋರ್ಟ್'ನಿಂದ ಪರಪ್ಪನ ಜೈಲಿಗೆ ಕಳುಹಿಸಲಾಗಿದೆ.