ಚುನಾವಣೆಗೂ ಮುನ್ನಾ 133 ರಾಜಕಾರಣಿಗಳ ಹತ್ಯೆ

133 politicians murdered ahead of Mexico elections
Highlights

ಚುನಾವಣೆ ನಡೆಯುವ ಮುನ್ನವೇ 133 ರಾಜಕಾರಣಿಗಳನ್ನು ಹತ್ಯೆ ಮಾಡಲಾಗಿದೆ. ಚುನಾವಣೆ ವೇಳೆ ಹಿಂಸಾಚಾರ ಇಲ್ಲಿ ಸಾಮಾನ್ಯ ಸಂಘತಿಯಾಗಿದ್ದು, ಭಾನುವಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯೊಂದು ಆಯೋಜನೆಗೊಂಡಿದ್ದು, ಈ ಚುನಾವಣೆಗೂ ಮುನ್ನ 133 ರಾಜಕಾರಣಿಗಳ ಬಲಿಯಾಗಿದೆ. 

ಮೆಕ್ಸಿಕೋ: ಚುನಾವಣೆ ವೇಳೆ ಹಿಂಸಾಚಾರ ಹೊಸದೇನಲ್ಲ. ಆದರೆ ಮೆಕ್ಸಿಕೋದಲ್ಲಿ ಭಾನುವಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯೊಂದು ಆಯೋಜನೆಗೊಂಡಿದ್ದು, ಈ ಚುನಾವಣೆಗೂ ಮುನ್ನ 133 ರಾಜಕಾರಣಿಗಳ ಬಲಿಯಾಗಿದೆ. 

ಸೆಪ್ಟಂಬರ್‌ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂದರ್ಭ ಬಹುತೇಕ ಕೊಲೆಗಳು ನಡೆದಿವೆ. ಇವರಲ್ಲಿ 48 ಮಂದಿ ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕಿಳಿದಿದ್ದವರು ಎಂದು ಎಟೆಲ್ಲೆಕ್ಟ್ ಸಮೀಕ್ಷೆ ವರದಿ ತಿಳಿಸಿದೆ. 

ಡ್ರಗ್‌ ಮಾಫಿಯಾದ ತಿಕ್ಕಾಟ ಈ ರಾಜಕೀಯ ಕೊಲೆಗಳಿಗೆ ಕಾರಣವೆನ್ನಲಾಗಿದೆ. ಭ್ರಷ್ಟಾಚಾರ, ಹಿಂಸಾಚಾರ ಚುನಾವಣೆಯ ಪ್ರಮುಖ ವಿಷಯವಾಗಿದೆ.

loader