ಶಾಲಾ ಬಸ್’ಗೆ ರೈಲು ಡಿಕ್ಕಿ; 13 ಮಕ್ಕಳು ದುರ್ಮರಣ

First Published 26, Apr 2018, 10:28 AM IST
13 students killed after school van collides with train at railway crossing in UP’s Kushinagar
Highlights

ಕುಶೀನಗರದಲ್ಲಿ ಶಾಲಾ ಬಸ್’ಗೆ ರೈಲು ಡಿಕ್ಕಿಯಾಗಿ  ಭೀಕರ ಅಪಘಾತ ಸಂಭವಿಸಿದೆ. ಬಸ್ ಡ್ರೈವರ್ ಸೇರಿದಂತೆ 13 ಮಕ್ಕಳು ದುರ್ಮರಣ ಹೊಂದಿದ್ದಾರೆ.  

ಲಕ್ನೋ (ಏ. 26): ಕುಶೀನಗರದಲ್ಲಿ ಶಾಲಾ ಬಸ್’ಗೆ ರೈಲು ಡಿಕ್ಕಿಯಾಗಿ  ಭೀಕರ ಅಪಘಾತ ಸಂಭವಿಸಿದೆ. ಬಸ್ ಡ್ರೈವರ್ ಸೇರಿದಂತೆ 13 ಮಕ್ಕಳು ದುರ್ಮರಣ ಹೊಂದಿದ್ದಾರೆ.  

ದುದಹೀ ರೈಲ್ವೆ ಕ್ರಾಸಿಂಗ್​ನಲ್ಲಿ ಶಾಲಾ ಬಸ್​’ಗೆ ರೈಲು ಡಿಕ್ಕಿಯಾಗಿದೆ. ಡಿವೈನ್ ಪಬ್ಲಿಕ್ ಸ್ಕೂಲ್’ಗೆ ಬಸ್’​ನಲ್ಲಿ 22 ಮಕ್ಕಳು ಶಾಲೆಗೆ ತೆರಳುತ್ತಿದ್ದರು. 8 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.  ಗಾಯಾಳು ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಹಾಗೂ ರೈಲ್ವೇ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ. 

loader