ಶಿಮ್ಲಾ[ಜು.16]:: ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯಲ್ಲಿ ಕಟ್ಟಡವೊಂದು ಕುಸಿದು ಬಿದ್ದು 14 ಜನರು ಸಾವನ್ನಪ್ಪಿ, 17 ಸೇನಾ ಸಿಬ್ಬಂದಿ ಸೇರಿದಂತೆ 28 ಜನರು ಗಾಯಗೊಂಡ ಘಟನೆ ನಹಾನ್‌- ಕುಮಾರಹಟ್ಟಿರಸ್ತೆಯಲ್ಲಿ ಭಾನುವಾರ ನಡೆದಿದೆ.

ನಾಲ್ಕು ಅಂತಸ್ತುಗಳ ಈ ಕಟ್ಟಡದಲ್ಲಿ ಕೆಳಮಹಡಿಗಳಲ್ಲಿ ವಾಸದ ಮನೆಗಳಿದ್ದರೆ, ಮೇಲಿನ ಮಹಡಿಯಲ್ಲಿ ರೆಸ್ಟೋರೆಂಟ್‌ ಇದ್ದು, ಅಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿಕ್ಕಿಹಾಕಿಕೊಂಡ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇನ್ನು ಸಾವನ್ನಪಿದವರಲ್ಲಿ 13 ಜನರು ಸೇನಾ ಸಿಬ್ಬಂದಿಗಳಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದವರ ಪತ್ತೆ ಕಾರ್ಯ ಮುಂದುವರೆದಿದ್ದು, ಘಟನಾ ಸ್ಥಳಕ್ಕೆ ಸಿಎಂ ಜೈ ರಾಮ್‌ ಠಾಕೂರ್‌ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.