ಮಲ್ಪೆ[ಮೇ.12]: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಶನಿವಾರ 1.2 ಟನ್‌(1200 ಕೆ.ಜಿ) ತೂಕದ ತೊರಕೆ ಮೀನು ದಿವ್ಯಾಂಶಿ ಎಂಬ ಹೆಸರಿನ ಬೋಟ್‌ ಬಲೆಗೆ ಬಿದ್ದಿತ್ತು. ಈ ಬೃಹತ್‌ ಗಾತ್ರದ ಮೀನು ಸಿಗುವುದು ಬಹಳ ಅಪರೂಪವಾಗಿದೆ.

ಬಲೆಗೆ ಸಿಕ್ಕ ಈ ಗಜಗಾತ್ರದ ಮೀನನ್ನು ದಡಕ್ಕೆ ಎಳೆಯಲು ಮೀನುಗಾರರು ಹರಸಾಹಸ ಪಡಬೇಕಾಯಿತು. ಕೊನೆಗೆ ಕ್ರೈನ್‌ನ ಸಹಾಯದಿಂದ ಬೋಟ್‌ನಿಂದ ಎತ್ತಿ ಮಲ್ಪೆ ಬಂದರಿಗೆ ಸಾಗಿಸಲಾಯಿತು. ತೊರಕೆ ಮೀನು ಅತ್ಯಂತ ರುಚಿ ಇರುತ್ತದೆ ಎನ್ನುತ್ತಾರೆ ಮೀನುಗಾರರು.

ಉಡುಪಿಯ ಮಾರುಕಟ್ಟೆಗೆ ಈ ಮೀನು .60 ಸಾವಿರಕ್ಕೆ ಮಾರಾಟವಾಗಿದೆ.