ನವದೆಹಲಿ: ವಿಮಾ ಕಂಪನಿಗಳು 2 ತಿಂಗಳ ಒಳ ಗಾಗಿ ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಪೂರ್ಣ ಪ್ರಮಾಣದ ವಿಮಾ ಹಣ ತುಂಬಿಕೊಡದಿದ್ದರೆ, ಶೇ. 12ರಷ್ಟು ಬಡ್ಡಿಯೊಂದಿಗೆ ವಿಮಾ ಹಣವನ್ನು ನೀಡಬೇಕಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ. 

ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿ, ಕೃಷಿ ಸಮಸ್ಯೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ನಷ್ಟ ಭರಿಸಲು ಸರ್ಕಾರ ‘ಪ್ರಧಾನ ಮಂತ್ರಿ ಫಸ ಲ್ ಬಿಮಾ’ ಯೋಜನೆಯನ್ನು 2016 ರ ಮುಂಗಾ ರು  ಋತುವಿನಿಂದ ಆರಂಭಿಸಿದೆ. ಹೀಗಾಗಿ ರೈತ ರು ಪೂರ್ಣ ಪ್ರಮಾಣದ ಬೆಳೆ ವಿಮೆಯನ್ನು ಪಡೆಯಲಿದ್ದಾರೆ,’ ಎಂದು ಹೇಳಿದ್ದಾರೆ.