Asianet Suvarna News Asianet Suvarna News

ವಿಶ್ವದ ಅತೀ ತೂಕದ ಪಪ್ಪಾಯ; ಕಲಬುರ್ಗಿ ರೈತನ ಗಿನ್ನೆಸ್ ದಾಖಲೆ

ನೀಲೂರು ದೇಸಾಯಿ ಅವರ ಸಾಧನೆ ಗಿನ್ನಿಸ್ ದಾಖಲೆಗೆ ಮಾತ್ರ ಸೀಮಿತವಾಗಿಲ್ಲ. ರೈತ ಸಮುದಾಯಕ್ಕೆ ಮಾದರಿಯೂ ಆಗಿದ್ದಾರೆ. 8 ಲಕ್ಷ ಖರ್ಚು ಮಾಡಿ ಒಂಬತ್ತು ಎಕರೆಯಲ್ಲಿ ಇವರು ಪಪಾಯ ಬೆಳೆದಿದ್ದು, ಬಂಪರ್ ಬೆಳೆ ಬಂದಿದೆ. ಒಂದೊಂದು ಗಿಡ ನೂರಕ್ಕೂ ಹೆಚ್ಚು ಹಣ್ಣುಗಳನ್ನು ಬಿಟ್ಟಿದೆ. ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ರುಪಾಯಿಯ ಬಂಡವಾಳ ಮರಳಿ ಬಂದಿದೆ.

12 kg pappaya grown by kalburgi farmer makes to guinness record book

ಕಲಬುರ್ಗಿ(ಅ. 07): ಬಿಸಿಲೂರಿನ ಜಿಲ್ಲೆಯಲ್ಲಿ ಬೆಳೆದ ಪಪಾಯ ಹಣ್ಣು ಗಿನ್ನಿಸ್ ದಾಖಲೆ ಸೇರಲಿದೆ. ಕಲಬುರ್ಗಿಯ ಕಲ್ಲಹಂಗರಗಾ ಗ್ರಾಮದ ರೈತ ದೇಸಾಯಿ ನೀಲೂರು ಅವರು ತಮ್ಮ ಹೊಲದಲ್ಲಿ ಬೆಳೆದ ಪಪ್ಪಾಯ ಹಣ್ಣುಗಳು ಗಜಗಾತ್ರದ್ದಾಗಿವೆ. ಅದರಲ್ಲೂ ಒಂದು ಪಪಾಯ ಹಣ್ಣಂತೂ ಬರೋಬ್ಬರಿ 12 ಕೆಜಿ ತೂಕ ಹೊಂದಿದೆ. ಇದು ಗಿನ್ನಿಸ್ ರಿಕಾರ್ಡ ಪುಟ ಸೇರಲು ಸಜ್ಜಾಗಿ ನಿಂತಿದೆ. ಸಾಮಾನ್ಯವಾಗಿ ಒಂದು ಪಪಾಯ ಹಣ್ಣು ಹೆಚ್ಚೆಂದರೆ ನಾಲ್ಕೈದು ಕೆಜಿ ಇರುತ್ತದೆ. 11 ಕಿಲೋ ತೂಗುವ ಪಪ್ಪಾಯವು ಇದೂವರೆಗಿನ ಗಿನ್ನೆಸ್ ದಾಖಲೆಯಾಗಿದೆ. ಈಗ ಕಲಬುರ್ಗಿ ರೈತ ಬೆಳೆದಿರುವ 12 ಕಿಲೋ ಪಪ್ಪಾಯವು ಗಿನ್ನೆಸ್ ಪುಸ್ತಕಕ್ಕೆ ದಾಖಲಾಗಲಿದೆ.

12 kg pappaya grown by kalburgi farmer makes to guinness record bookಪಪ್ಪಾಯ ಹೇಗೆ ಬೆಳೆಯಬೇಕು?:
ನೀಲೂರು ದೇಸಾಯಿ ಅವರ ಸಾಧನೆ ಗಿನ್ನಿಸ್ ದಾಖಲೆಗೆ ಮಾತ್ರ ಸೀಮಿತವಾಗಿಲ್ಲ. ರೈತ ಸಮುದಾಯಕ್ಕೆ ಮಾದರಿಯೂ ಆಗಿದ್ದಾರೆ. 8 ಲಕ್ಷ ಖರ್ಚು ಮಾಡಿ ಒಂಬತ್ತು ಎಕರೆಯಲ್ಲಿ ಇವರು ಪಪಾಯ ಬೆಳೆದಿದ್ದು, ಬಂಪರ್ ಬೆಳೆ ಬಂದಿದೆ. ಒಂದೊಂದು ಗಿಡ ನೂರಕ್ಕೂ ಹೆಚ್ಚು ಹಣ್ಣುಗಳನ್ನು ಬಿಟ್ಟಿದೆ. ಈಗಾಗಲೇ ನಾಲ್ಕು ಲಕ್ಷಕ್ಕೂ ಹೆಚ್ಚು ರುಪಾಯಿಯ ಬಂಡವಾಳ ಮರಳಿ ಬಂದಿದೆ. ಐನೂರು ಟನ್'ಗೂ ಹೆಚ್ಚು ಇಳುವರಿ ಬರುವ ನಿರೀಕ್ಷೆ ಇದೆ. ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಳ್ಳುವ ಮೂಲಕ ಇವರು ಸಮಸ್ತ ರೈತ ಕುಲಕ್ಕೆ ಮಾದರಿಯಾಗಿದ್ದಾರೆ. ಇವರ ಈ ಯಶೋಗಾಥೆಗೆ ಕಾರಣ, ಆಧುನಿಕ ಮತ್ತು ದೇಸಿಯ ಕೃಷಿ ಪದ್ದತಿಯ ಮಿಶ್ರಣವೆಂದು ಹೇಳಲಾಗುತ್ತಿದೆ.

ಇವರು ಪಪಾಯ ಸಸಿ ನಾಟಿ ಮಾಡುವ ಮುನ್ನ ತೊಗರಿ ಹೊಟ್ಟು ಮತ್ತು ತೊಗರಿ ಕಟ್ಟಿಗೆಯಿಂದ ಹೊಲಪೂರ್ತಿ ಮಲಚಿಂಗ್ ಮಾಡಿ ಭೂಮಿ ಫಲವತ್ತತೆ ಹೆಚ್ಚು ಮಾಡಿದ್ದಾರೆ. ಇದು ಆಧುನಿಕ ಕ್ರಮವಾದ್ರೆ, ದೇಶಿ ಪದ್ದತಿಯಂತೆ ದನದ ಸಗಣಿಯನ್ನು ಯಥೇಚ್ಛವಾಗಿ ಭೂಮಿಗೆ ಹಾಕಿದ್ದಾರೆ. ಇದುವೇ, ಇವರ ಈ ಭರ್ಜರಿ ಇಳುವರಿಗೆ ಕಾರಣವಾಗಿದೆ.

Follow Us:
Download App:
  • android
  • ios