ಥೈಲ್ಯಾಂಡ್ ಗುಹೆಯಲ್ಲಿ ಫುಟ್ಬಾಲ್ ತಂಡ11 ಬಾಲಕರು ಸುರಕ್ಷಿತವಾಗಿ ಹೊರಗೆಉಳಿದಿರುವುದು ಕೋಚ್ ಮತ್ತೋರ್ವ ಬಾಲಕ ಮಾತ್ರಇಂದೇ ಕಾರ್ಯಾಚರಣೆ ಮುಗಿಯುವ ಸಾಧ್ಯತೆ
ಬ್ಯಾಂಕಾಕ್(ಜು.10): ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿರುವ ಬಾಲಕರ ಫುಟ್ಬಾಲ್ ತಂಡದ ಸುರಕ್ಷತೆಗೆ ಇಡೀ ವಿಶ್ವವೇ ಪ್ರಾರ್ಥನೆ ಮಾಡುತ್ತಿತ್ತು. ಇದೀಗ ಈ ಪ್ರಾರ್ಥನೆ ಫಲಿಸಿದ್ದು, ಗುಹೆಯಲ್ಲಿ ಎಲ್ಲ 12 ಬಾಲಕರು ಮತ್ತು ಕೋಚ್ ಅವರನ್ನು ರಕ್ಷಣಾ ತಂಡ ಮೇಲೆ ತರುವಲ್ಲಿ ಯಶಸ್ವಿಯಾಗಿದೆ. ಅಬ್ಬರದ ಮಳೆಯ ನಡುವೆಯೂ ಸಾಹಸೀ ರಕ್ಷಣಾ ಕಾರ್ಯಾಚರಣೆಗೆ ಜಯ ಸಿಕ್ಕಿದೆ.
ಕಳೆದ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ 4, ಸೋಮವಾರ 4 ಮತ್ತು ಇಂದಿನ ಕಾರ್ಯಾಚರಣೆಯಲ್ಲಿ4 ಬಾಲಕರು ಮತ್ತು ಕೋಚ್ ಅವರನ್ನು ತರುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ ಎರಡು ವಾರಗಳಿಂದ ಇಡೀ ಜಗತ್ತು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಸಿಹಿ ಸುದ್ದಿ ಕೊನೆಗೂ ಬಂದಂತಾಗಿದೆ.
ಥೈಲ್ಯಾಂಡ್ನ ಚಿಯಾಂಗ್ ರಾಯ್ ಬಳಿಯ ಗುಹೆಯಲ್ಲಿ ಕೋಚ್ ಸಮೇತ 12 ಬಾಲಕರು ಗುಹೆಯೊಳಗೆ ಸಿಲುಕಿಕೊಂಡಿದ್ದರು. ಜೀವದ ಹಂಗನ್ನೂ ತೊರೆದು ಡೈವರ್ಗಳ ತಂಡ ಜ್ಯೂನಿಯರ್ ಫುಟ್ಬಾಲ್ ತಂಡವನ್ನು ರಕ್ಷಿಸಲು ನಿರಂತರ ಕಾರ್ಯಾಚರಣೆ ಮಾಡಿ ಫುಟ್ಇಬಾಲ್ಡೀ ತಂಡವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.
