2016ನೇ ಬ್ಯಾಚ್‌ನ 122 ಐಪಿಎಸ್‌ ಅಧಿಕಾರಿಗಳಲ್ಲಿ 119 ಮಂದಿ ಅನುತ್ತೀರ್ಣ!

119 of 122 IPS officers fail to clear police academy exam
Highlights

ಐಎಎಸ್‌, ಐಪಿಎಸ್‌ ರ್ಯಾಂಕ್ ಪಡೆದವರೆಂದರೆ, ಬಹಳ ಬುದ್ಧಿವಂತರು ಎಂಬ ಭಾವನೆ ಎಲ್ಲರಲ್ಲಿ ಇರುತ್ತದೆ. ಅಚ್ಚರಿ ಎಂದರೆ 2016ನೇ ಬ್ಯಾಚ್‌ನ ಐಪಿಎಸ್‌ ನೇಮಕಾತಿ ತಂಡ ಇದಕ್ಕೆ ತದ್ವಿರುದ್ಧವಾಗಿದೆ. 

ಹೈದರಾಬಾದ್‌: ಐಎಎಸ್‌, ಐಪಿಎಸ್‌ ರ್ಯಾಂಕ್ ಪಡೆದವರೆಂದರೆ, ಬಹಳ ಬುದ್ಧಿವಂತರು ಎಂಬ ಭಾವನೆ ಎಲ್ಲರಲ್ಲಿ ಇರುತ್ತದೆ. 

ಅಚ್ಚರಿ ಎಂದರೆ 2016ನೇ ಬ್ಯಾಚ್‌ನ ಐಪಿಎಸ್‌ ನೇಮಕಾತಿ ತಂಡ ಇದಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ, ಹುದ್ದೆಗೆ ನಿಯೋಜನೆಗೂ ಮುನ್ನ ಇವರಿಗೆ ಹೈದರಾಬಾದ್‌ನಲ್ಲಿ ನಡೆದ ಪೊಲೀಸ್‌ ಅಕಾಡೆಮಿ ಪರೀಕ್ಷೆ ವೇಳೆ 112 ಜನರ ಪೈಕಿ 119 ಜನರು ಒಂದಲ್ಲಾ ಒಂದು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. 

ಇಬ್ಬರು ಪದವಿ ಪಡೆಯಲು ವಿಫಲರಾಗಿದ್ದಾರೆ. ಇದರ ಹೊರತಾಗಿಯೂ ಇವರನ್ನೆಲ್ಲಾ ಇದೀಗ ಪ್ರೊಬೇಶನರಿ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಇವರೆಲ್ಲಾ ಮುಂದಿನ ಮೂರು ಪ್ರಯತ್ನದಲ್ಲಿ ತಾವು ಅನುತ್ತೀರ್ಣರಾಗಿರುವ ವಿಷಯಗಳಲ್ಲಿ ಉತ್ತೀರ್ಣರಾದರೆ ಅವರು ಸೇವೆಯಲ್ಲಿ ಮುಂದುವರಿಯುತ್ತಾರೆ. 

ಇಲ್ಲದಿದ್ದಲ್ಲಿ ಅವರನ್ನು ಸೇವೆಯಿಂದ ಹಿಂದಕ್ಕೆ ಕರೆಸಿಕೊಳ್ಳಲಾಗುತ್ತದೆ. ಈ ರೀತಿಯ ಫಲಿತಾಂಶ ಅಕಾಡೆಮಿ ಇತಿಹಾಸದಲ್ಲೇ ಮೊಟ್ಟಮೊದಲನೆಯದ್ದು. ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

loader