ನಕಲಿ ಎಸ್’ಸಿ-ಎಸ್’ಟಿ ದಾಖಲೆ : 11700 ನೌಕರರು ಮನೆಗೆ..?

First Published 5, Feb 2018, 8:44 AM IST
11700 SC ST  staff in Maharashtra govt face sack
Highlights

ನಕಲಿ ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದ ಮಹಾರಾಷ್ಟ್ರದ 11700 ನೌಕರರಿಗೆ ಇದೀಗ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಮುಂಬೈ: ನಕಲಿ ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದ ಮಹಾರಾಷ್ಟ್ರದ 11700 ನೌಕರರಿಗೆ ಇದೀಗ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

2017ರ ಜುಲೈನಲ್ಲಿ ಸುಪ್ರೀಂಕೋರ್ಟ್, ನಕಲಿ ಜಾತಿ ಪ್ರಮಾಣಪತ್ರ ನೀಡಿ ಉದ್ಯೋಗ ಪಡೆದವರನ್ನು ಕೆಲಸದಿಂದ ವಜಾ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು.

ಆದೇಶ ಹೊರಬಿದ್ದು 7 ತಿಂಗಳಾದರೂ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಒಮ್ಮೆಗೆ ಇಷ್ಟು ಜನರನ್ನು ಕೆಲಸದಿಂದ ತೆಗೆಯುವುದು ಹೇಗೆ ಎಂಬ ಆತಂಕ ಅದರದ್ದು. ತೆಗೆಯದೇ ಹೋದಲ್ಲಿ ನ್ಯಾಯಾಂಗ ನಿಂದನೆ ಭೀತಿ ಎದುರಿಸಬೇಕಾಗು ತ್ತದೆ.  ಹೀಗಾಗಿ ಸರ್ಕಾರ ಮುಂದೇನು ಮಾಡ ಬೇಕೆಂಬ ಬಗ್ಗೆ ಗೊಂದಲಕ್ಕೆ ಬಿದ್ದಿದೆ.

loader