Asianet Suvarna News Asianet Suvarna News

ನಮ್ಮ ಸಾಗರ ಇಣುಕಿದ್ರೆ ಜೋಕೆ: 111 ಹೆಲಿಕಾಫ್ಟರ್ ಖರೀದಿಗೆ ಒಪ್ಪಿಗೆ!

ನೌಕಾಪಡೆ ಬಲವರ್ಧನೆಗೆ ಕೇಂದ್ರದ ಕ್ರಮ! ನೌಕಾಪಡೆಗಾಗಿ 111 ಹೆಲಿಕಾಪ್ಟರ್ ಖರೀದಿ! 21 ಕೋಟಿ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಖರೀದಿ! ರಕ್ಷಣಾ ಇಲಾಖೆಯ ಡಿಎಸಿ ಸಭೆಯಲ್ಲಿ ಮಹತ್ವದ ನಿರ್ಧಾರ 

111 New Helicopters To Be Bought For Navy For Rs. 21,000 Crore
Author
Bengaluru, First Published Aug 25, 2018, 7:01 PM IST

ನವದೆಹಲಿ(ಆ.25): ನೌಕಾಪಡೆಗೆ ಶಕ್ತಿ ತುಂಬಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ನೌಕಾಪಡೆಗಾಗಿ 111 ಹೆಲಿಕಾಪ್ಟರ್ ಖರೀದಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

ಹೆಲಿಕಾಪ್ಟರ್  ಸ್ವಾಧೀನ ಸೇರಿದಂತೆ ಸುಮಾರು 46 ಸಾವಿರ ಕೋಟಿ ರೂ. ಮೌಲ್ಯದ ಖರೀದಿ ಪ್ರಸ್ತಾವವನ್ನು ಸಚಿವಾಲಯ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ.  ರಕ್ಷಣಾ ಇಲಾಖೆಯ ಡಿಎಸಿ ಸಭೆಯಲ್ಲಿ ಈ ನಿರ್ಧಾರವನ್ನು  ತೆಗೆದುಕೊಳ್ಳಲಾಗಿದೆ.
 
ಭಾರತೀಯ ನೌಕಪಡೆಗಾಗಿ ಸುಮಾರು 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 111 ಬಳಕೆಯ ಹೆಲಿಕಾಪ್ಟರ್ ಖರೀದಿಗೆ ರಕ್ಷಣಾ ಇಲಾಖೆಯ ಸಭೆ ಅನುಮೋದನೆ ನೀಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಗಾಗಿ  ಅಂದಾಜು 3, 364 ಕೋಟಿ ರೂ . ವೆಚ್ಚದಲ್ಲಿ ಸ್ವದೇಶಿ ತಂತ್ರಜ್ಞಾನದ ಫಿರಂಗಿ ಗನ್ ಸ್ವಾಧೀನ ಸೇರಿದಂತೆ,  ಅಂದಾಜು 24, 879 ಕೋಟಿ ರೂ. ವೆಚ್ಚದಲ್ಲಿ  ಇನ್ನಿತರ ಖರೀದಿ ಪ್ರಸ್ತಾವನೆಗೆ ರಕ್ಷಣಾ ಇಲಾಖೆ ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios