Asianet Suvarna News Asianet Suvarna News

ಬೇಸಿಗೆಯಲ್ಲಿ ಬೆಂಕಿ: ನಿಮ್ಮ ಎಚ್ಚರದಲ್ಲಿ ನೀವಿರಿ...

ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ಅಗ್ನಿ ಅವಘಡ ಸಂಭವಿಸುವುದು ಸಾಮಾನ್ಯವಾಗಿದೆ. ಆದರೆ ಬೆಂಕಿ ಹೊತ್ತುವ ಮೊದಲೇ ಮುನ್ನೆಚ್ಚರಿಕೆ ಕೈಗೊಳ್ಳುವುದು ಸೂಕ್ತ. ಅದಕ್ಕೆ ನೀವೇನು ಮಾಡಬೇಕು.  

11 Tips to prevent fire mishaps
Author
Bengaluru, First Published Feb 25, 2019, 3:52 PM IST

ಬೆಂಗಳೂರು: ಅಲ್ಲಿ ಬಂಡೀಪುರ ಅಭಯಾರಣ್ಯ ಹೊತ್ತಿ ಉರಿಯುತ್ತಿದೆ. ಪ್ರಾಣಿ ಸಂಕುಲಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಇತ್ತ ಮಲೆನಾಡಿನಲ್ಲಿಯೂ ಅಗ್ನಿ ದೇವ ಆರ್ಭಟಿಸುತ್ತಿದ್ದಾನೆ. ಬಿಸಿಲಿನ ಬೇಗೆಗೆ ಈಗಲೇ ಬಸವಳಿಯುತ್ತಿರುವ ಮಂದಿ, ಬೆಂಕಿ ಅವಘಡಗಳಿಗೆ ಬೆಚ್ಚಿ ಬಿದ್ದಿದ್ದಾರೆ. ಸಾಲದ್ದಕ್ಕೆ ಪರಿಸರದ ಸುತ್ತಲಿರುವ ಕಸಕ್ಕೂ ಬೆಂಕಿ ಹಚ್ಚುತ್ತಿದ್ದಾರೆ ಜನ. ಇದೇ ಬೆಂಕಿ ಅವಘಡಕ್ಕೂ ಕಾರಣವಾಗಬಹುದು. 

ಈ ಸಂದರ್ಭದಲ್ಲಿ ಬೆಂಕಿ ಎಂದ ಕೂಡಲೇ ನಿರ್ಲಕ್ಷಿಸಲೇ ಕೂಡದು. ಎಲ್ಲರೂ ಜಾಗೃತರಾಗಿರಬೇಕು. ಇದು ಪ್ರತಿಯೊಬ್ಬ ನಾಗರಿಕ ಹೊಣೆಯೂ ಹೌದು. ಪ್ರತಿಯೊಬ್ಬರೂ ಈ ಅಗ್ನ ಅವಘಡಗಳನ್ನು ತಡೆಯುವಲ್ಲಿ ಹೇಗೆ ಅಲರ್ಟ್ ಆಗಿರಬೇಕೆನ್ನುವುದಕ್ಕೆ ಇಲ್ಲಿವೆ ಟಿಪ್ಸ್.

  • - ಬಿಲಿಸಿಲಿಗೆ ಎಲ್ಲವೂ ಗರಿಗರಿಯಾಗಿದ್ದು, ಬೆಂಕಿ ಬೇಗ ಹೊತ್ತಿಕೊಳ್ಳುತ್ತದೆ. ಈ ಬಗ್ಗೆ ಇರಲಿ ಗಮನ.
  • - ಸಿಗರೇಟ್ ಸೇದಿ ಎಲ್ಲೆಂದರಲ್ಲಿ ಎಸೆದರೆ ಭೀಕರ ಅನಾಹುತವನ್ನೇ ಸೃಷ್ಟಿಸಬಹುದು. 
  • - ಒಣಹುಲ್ಲು ಇರುವ ಪ್ರದೇಶಗಳಲ್ಲಿ ಜನರು ಬೆಂಕಿ ಬಗ್ಗೆ ಜಾಗರೂಕರಾಗಿಬೇಕು. 
  • - ಸಣ್ಣ ಕಿಡಿಯನ್ನೂ ನಿರ್ಲಕ್ಷಿಸಬೇಡಿ. 
  • - ಹತ್ತಿರದ ಪ್ರದೇಶದಲ್ಲಿ ಬೆಂಕಿ ಕಾಣಿಸಿದರೆ, ಆತಂಕಗೊಳ್ಳುವ ಅಗತ್ಯವಿಲ್ಲ. ಅಗ್ನಿಶಾಮಕ ದಳಕ್ಕೆ [101]ಕರೆ ಮಾಡಿ. 30 ನಿಮಿಷಗಳ ಒಳಗಾಗಿ ಸ್ಥಳಕ್ಕೆ ಆಗಮಿಸಿ ಅವರು ಅಗತ್ಯ ಕ್ರಮ ಕೈಗೊಳ್ಳಲ್ಲಿದ್ದಾರೆ. 
  • - ಬೆಂಕಿ ಶೀಘ್ರವಾಗಿ ತನ್ನ ಜ್ವಾಲೆಯನ್ನು ವ್ಯಾಪಿಸುವುದರಿಂದ ನಿಮ್ಮ ಅಕ್ಕಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನಿಮ್ಮ ಕೈಲಾದ ಮಟ್ಟಿಗೆ ಬೆಂಕಿ ನಂದಿಸಲು ಒಂದಾಗಿ.
  • - ಬೆಂಕಿ ಕಾಣಿಸಿಕೊಂಡ ಪ್ರದೇಶದಲ್ಲಿ ಯಾವುದೇ ವಾಹನಗಳಿದ್ದಲ್ಲಿ ತಕ್ಷಣವೇ ಅವನ್ನು ಬೇರೆಡೆ ಸ್ಥಳಾಂತರಿಸಿ. 
  • - ಬೆಂಕಿ ನಂದಿಸುವವರಿಗೆ ಹೆಚ್ಚು ಬಾಯಾರಿಕೆ ಆಗುವುದರಿಂದ, ಸ್ಥಳದಲ್ಲಿ ಕುಡಿಯುವ ನೀರಿನ ಬಾಟಲ್ ಒಯ್ಯುವುದನ್ನು ಮರೆಯದಿರಿ. 
  • - ಬೆಂಕಿ ನಂದಿಸಲು ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಿ. ಶೂ ಧರಿಸಿ. ಕೂದಲನ್ನು ಸರಿಯಾಗಿ ಕಟ್ಟಿಕೊಳ್ಳಿ.  ಮಾಸ್ಕ್ , ಸ್ಕಾರ್ಪ್ ಧರಿಸುವುದು ಮರೆಯದಿರಿ. ಮೂಗನ್ನು ಕವರ್ ಮಾಡಿಕೊಳ್ಳಿ. 
  • - ಇನ್ನು ಹಸಿಯಾದ ರೆಂಬೆಗಳನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬಹುದು. ಬಕೆಟ್‌ನಲ್ಲಿ ನೀರು ತಂದು ಸುರಿಯಿರಿ. 
  • - ಕಸವನ್ನೂ ಎಲ್ಲೆಂದರಲ್ಲಿ ಅಲ್ಲಿ ಎಸೆಯಬೇಡಿ.  ಅಗ್ನಿ ಅವಘಡ ಸಂದರ್ಭದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಅವನ್ನು ಕೊಲ್ಲಬೇಡಿ. ಈ ಸಂದರ್ಭದಲ್ಲಿ ಹಾವು ಹಿಡಿಯುವವರಿಗೆ ಕರೆ ಮಾಡಿ, ಅವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ.

ಹಾವು ಹಿಡಿಯಲು  BBMP ಸಹಾಯವಾಣಿ –  080 22221188

Follow Us:
Download App:
  • android
  • ios