10ನೇ ತರಗತಿ ಪಾಸಾದರಷ್ಟೇ ಪಂಜಾಬ್‌ನಲ್ಲಿ ಸಚಿವ ಸ್ಥಾನ

First Published 25, Apr 2018, 8:21 AM IST
10th pass qualification required To MInister Post in Punjab
Highlights

ಅಮರಿಂದರ್‌ ಸಿಂಗ್‌ ನೇತೃತ್ವದ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರ, ರಾಜ್ಯದಲ್ಲಿ ಸಚಿವರಾಗಲು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಎಂಬ ನಿಯಮ ರೂಪಿಸಿದೆ. ಪಡೋ ಪಂಜಾಬ್‌, ಪಡಾವೋ ಪಂಜಾಬ್‌ ಎಂಬ ಅಭಿಯಾನವನ್ನು ಸರ್ಕಾರ ರೂಪಿಸಿದ್ದು ಈ ಹಿನ್ನೆಲೆಯಲ್ಲಿ ಸಚಿವರಾಗಲು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ.

ಚಂಡೀಗಢ: ಅಮರಿಂದರ್‌ ಸಿಂಗ್‌ ನೇತೃತ್ವದ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರ, ರಾಜ್ಯದಲ್ಲಿ ಸಚಿವರಾಗಲು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಎಂಬ ನಿಯಮ ರೂಪಿಸಿದೆ. ಪಡೋ ಪಂಜಾಬ್‌, ಪಡಾವೋ ಪಂಜಾಬ್‌ ಎಂಬ ಅಭಿಯಾನವನ್ನು ಸರ್ಕಾರ ರೂಪಿಸಿದ್ದು ಈ ಹಿನ್ನೆಲೆಯಲ್ಲಿ ಸಚಿವರಾಗಲು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ.

ಇದೇ ಕಾರಣದಿಂದಾಗಿಯೇ ಇತ್ತೀಚೆಗೆ ಸಚಿವ ಸಂಪುಟ ಸೇರ್ಪಡೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ದಲಿತ ಮುಖಂಡ ಸಂಗೀತ್‌ಸಿಂಗ್‌ ಗಿಲ್ಜಿಯಾನ್‌ ಅವಕಾಶದಿಂದ ವಂಚಿತರಾಗಿದ್ದಾರೆ. ಉಳಿದಂತೆ ಇತ್ತೀಚೆಗೆ ಸಂಪುಟಕ್ಕೆ ಸೇರಿದ 9 ಮಂದಿ ಸಚಿವರು 10ನೇ ತರಗತಿಯ ವರೆಗೆ ವ್ಯಸಂಗ ಮಾಡಿದವರಾಗಿದ್ದಾರೆ. 10ನೇ ತರಗತಿ ಪಾಸಾಗದ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಲು ರಾಹುಲ್‌ ಗಾಂಧಿ ನಿರಾಕರಿಸಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಆದರೆ ಸರ್ಕಾರದ ಈ ನಡೆ ದಲಿತ ಆಕ್ರೋಶಕ್ಕೆ ಕಾರಣವಾಗಿದೆ.

loader