ಅಬ್ಬಬ್ಬಾ...106 ನಾಗರಹಾವುಗಳೊಂದಿಗೆ ವಾಸವಿದ್ದ ರೈತ!

106 cobras found in Odisha farmer’s house
Highlights

ಹಲವಾರು ವರ್ಷಗಳಿಂದ ಆ ರೈತ ತನ್ನ ಮನೆಯಲ್ಲಿ  ವಾಸವಾಗಿದ್ದ. ಆದರೆ ಹಾವುಗಳೊಂದಿಗೆ ತಾನು ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂಬ ಸತ್ಯ ಮಾತ್ರ ಗೊತ್ತಿರಲಿಲ್ಲ.

ಒರಿಸ್ಸಾ[ಜೂ.24] ಹಲವಾರು ವರ್ಷಗಳಿಂದ ಆ ರೈತ ತನ್ನ ಮನೆಯಲ್ಲಿ  ವಾಸವಾಗಿದ್ದ. ಆದರೆ ಹಾವುಗಳೊಂದಿಗೆ ತಾನು ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂಬ ಸತ್ಯ ಮಾತ್ರ ಗೊತ್ತಿರಲಿಲ್ಲ.

ಓರಿಸ್ಸಾದ ಪೈಕಸಾಕಿ ಹಳ್ಳಿಯ ರೈತ ಬಿಜ್ಜು ಭುಯಾನ್ ಮನೆಯಲ್ಲಿ ನಾಗರಹಾವು ಪತ್ತೆಯಾಗಿದೆ. ಇದಿಷ್ಟೆ ಸುದ್ದಿಯಾಗಿದ್ದರೆ ಅಂದುಕೊಳ್ಳುವುದು ಏನೂ ಇರುತ್ತಿರಲಿಲ್ಲ. ಆದರೆ ಆತನ ಮನೆಯಲ್ಲಿ ಪತ್ತೆಯಾಗಿದ್ದು ಒಂದೆಲ್ಲಾ, ಎರಡಲ್ಲ 106 ನಾಗರಹಾವುಗಳು!

ಹಾವೊಂದು ಪತ್ತೆಯಾದ ನಂತರ ಹುಡುಕಿಕೊಂಡು ಹೋದಾಗ ಹುತ್ತವೂ ಸಿಕ್ಕಿದೆ. ಗ್ರಾಮಸ್ಥರೆಲ್ಲ ಆಗಮಿಸಿ ಹುಡುಕಿದಾಗ 106 ನಾಗರಹಾವುಗಳು ಪತ್ತೆಯಾಗಿವೆ.  99 ಹಾವುಗಳನ್ನು ರಕ್ಷಣೆ ಮಾಡಲಾಗಿದ್ದು ಆರು ಹಾವುಗಳು ಅದಾಗಲೇ ಸಾವನ್ನಪ್ಪಿದ್ದವು. ಅಲ್ಲದೇ 19 ಹಾವಿನ ಮೊಟ್ಟೆಗಳು ಸಿಕ್ಕಿವೆ.

loader