ಇಂದು ಮುಂಜಾನೆ 6.20 ಕ್ಕೆ ಪಾಕಿಸ್ತಾನಿ ಸೇನೆಯು ದಾಳಿಗಳನ್ನು ಆರಂಭಿಸಿದ್ದು, 7 ಗ್ರಾಮದ ಜನರು ಇದರಿಂದ ಸಂತ್ರಸ್ತರಾಗಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದವರ ಸಂಖ್ಯೆ 978 ತಲುಪಿದೆ. ಈಗಾಗಲೇ 3 ಗ್ರಾಮಗಳಿಂದ 259 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು (ಮೇ.14): ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್’ಓಸಿ) ಪಾಕಿಸ್ತಾನಿ ಪಡೆಗಳು ಭಾನುವಾರವೂ ಶೆಲ್ ದಾಳಿಗಳನ್ನು ಮುಂದುವರೆಸಿವೆ. ರಾಜೌರಿ ಜಿಲ್ಲೆಯಲ್ಲಿ ನಿನ್ನೆಯಿಂದಲೂ ಅವುಗಳು ಶೆಲ್ ದಾಳಿಗಳನ್ನು ನಡೆಸುತ್ತಿದ್ದು, ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ. ಶೆಲ್ ದಾಳಿಯು ಮುಂದುವರಿದ ಹಿನ್ನೆಲೆಯಲ್ಲಿ ಗಡಿ ಗ್ರಾಮಗಳಲ್ಲಿ ವಾಸಿಸುವ ಸುಮಾರು ಒಂದು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಶನಿವಾರ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನಪ್ಪಿದ್ದು ಮೂವರು ಗಾಯಗೊಂಡಿದ್ದರು, ಭಾರತೀಯ ಸೇನೆಯು ತಕ್ಕ ಪ್ರತಿಕ್ರಿಯೆಯನ್ನು ನೀಡಿದೆ.