ಬ್ಯಾರೆ ಹಳ್ಳಿ ಮಂಜುನಾಥ್, ಮೂರ್ತಿ, ರಾಮಪ್ಪ, ಮನಪ್ಪಗೌಡ, ಸತೀಶ್ ಎಂಬುವರ ಮೇಲೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ(ನ.30): ಎಸ್ಪಿ ಅಭಿನವ ಖರೆ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ 100 ಲೋಡ್ ಮರಳು ವಶಪಡಿಸಿ ಕೊಳ್ಳಲಾಗಿದೆ. ಆಗುಂಬೆ ಠಾಣೆ ವ್ಯಾಪ್ತಿಯ ಕಡ್ತೂರು ಸಮೀಪದ ಬ್ಯಾರೆಹಳ್ಳಿ ಗ್ರಾಮದಲ್ಲಿ 6 ಪ್ರಕರಣಗಳನ್ನು ಪತ್ತೆ ಹಚ್ಚಿ 100 ಲೋಡ್ ಅಕ್ರಮ ಮರಳು ದಾಸ್ತಾನು, ಟ್ರಾಕ್ಟರ್ ಜಪ್ತಿ ಮಾಡಲಾಗಿದೆ.

ಬ್ಯಾರೆ ಹಳ್ಳಿ ಮಂಜುನಾಥ್, ಮೂರ್ತಿ, ರಾಮಪ್ಪ, ಮನಪ್ಪಗೌಡ, ಸತೀಶ್ ಎಂಬುವರ ಮೇಲೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿ ಡಿವೈಎಸ್ಪಿ ಗಣೇಶ್ ಹೆಗ್ಡೆ, ಸಿಪಿಐ ಸುರೇಶ್, ಡಿಸಿಬಿ ಇನ್ಸ್‌ಪೆಕ್ಟರ್ ಕೆ.ಕುಮಾರ್ ಮತ್ತು ಸಿಬ್ಬಂದಿ ಹಾಗೂ ಮೇಗರವಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು.