ಎಟಿಎಂನಿಂದ ಹಣ ವಿಥ್‌'ಡ್ರಾ ಮಾಡಲು ಹೋದಾಗ ಈ ಅಂಶ ಪತ್ತೆಯಾಗಿದೆ. ಖಾತೆಯಲ್ಲಿ ₹99,99,02,724 ಹಣ ಜಮೆ ಆಗಿರುವುದು ಅವರ ಗಮನಕ್ಕೆ ಬಂದಿತು. ಕೂಡಲೇ ಅವರು ಶಾಸಕ ಸೋಲಂಕಿಯವರಿಗೆ ಮಾಹಿತಿ ನೀಡಿದರು.
ಕಾನ್ಪುರ(ಜ.04): ಉತ್ತರ ಪ್ರದೇಶದ ಆಡಳಿತಾರೂಡ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ಅಂಗರಕ್ಷಕ ಗುಲಾಂ ಜಿಲಾನಿ ಬ್ಯಾಂಕ್ ಖಾತೆಯಲ್ಲಿ ₹100 ಕೋಟಿ ಜಮೆಯಾಗಿದೆ.
ಮಂಗಳವಾರ ರಾತ್ರಿ ಎಟಿಎಂನಿಂದ ಹಣ ವಿಥ್'ಡ್ರಾ ಮಾಡಲು ಹೋದಾಗ ಈ ಅಂಶ ಪತ್ತೆಯಾಗಿದೆ. ಖಾತೆಯಲ್ಲಿ ₹99,99,02,724 ಹಣ ಜಮೆ ಆಗಿರುವುದು ಅವರ ಗಮನಕ್ಕೆ ಬಂದಿತು. ಕೂಡಲೇ ಅವರು ಶಾಸಕ ಸೋಲಂಕಿಯವರಿಗೆ ಮಾಹಿತಿ ನೀಡಿದರು.
ಸುದ್ದಿ ತಿಳಿದ ಕುಶೀನಗರ ಜಿಲ್ಲಾಧಿಕಾರಿ ಕುಶಾಲ್ ರಾಜ್ ಶರ್ಮಾ ಧಾವಿಸಿ ಬಂದು ಪರಿಶೀಲನೆ ನಡೆಸಿದರು. ‘‘ಎಸ್ಬಿಐ ಖಾತೆಯಲ್ಲಿ ಜಿಲಾನಿ ಅವರ ಖಾತೆ ಇದೆ. ಈ ಬಗ್ಗೆ ಎಸ್'ಬಿಐ ಶಾಖೆಯ ಡೆಪ್ಯುಟಿ ಜನರಲ್ ಮ್ಯಾನೆಜರ್ ಬಳಿ ಮಾತಾನಾಡಿದ್ದೇನೆ ಹಾಗೂ ಮಾಹಿತಿ ಕೋರಿ ಬ್ಯಾಂಕ್'ಗೆ ಅರ್ಜಿ ಸಲ್ಲಿಸಲು ಜಿಲಾನಿ ಅವರಿಗೆ ಸೂಚಿಸಿದ್ದೇನೆ,’’ ಎಂದು ಶರ್ಮಾ ಅವರು ತಿಳಿಸಿದ್ದಾರೆ.
