Published : Apr 02 2017, 01:22 AM IST| Updated : Apr 11 2018, 12:41 PM IST
Share this Article
FB
TW
Linkdin
Whatsapp
ಆಹಾರ ಭದ್ರತಾ ಕಾಯಿದೆ ನಿಯಮಗಳ ಉಲ್ಲಂಘಿಸಿ ಆಹಾರ ಪದಾರ್ಥಗಳ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಗ್ರಾಹಕರ ಹಕ್ಕುಗಳ ನ್ಯಾಯಾಲಯ, ಹುಳು ಬಿದ್ದಿದ್ದ ರವೆ ಮಾರಾಟ ಮಾಡಿದ್ದ ಪ್ರತಿಷ್ಠಿತ ಚಿಲ್ಲರೆ ಮಾರಾಟ ಮಳಿಗೆ ‘ಬಿಗ್‌ಬಜಾರ್‌'ಗೆ .10 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ತಾಕೀತು ಮಾಡಿದೆ.
ಬೆಂಗಳೂರು(ಎ.02): ಆಹಾರ ಭದ್ರತಾ ಕಾಯಿದೆ ನಿಯಮಗಳ ಉಲ್ಲಂಘಿಸಿ ಆಹಾರ ಪದಾರ್ಥಗಳ ಮಾರಾಟ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಗ್ರಾಹಕರ ಹಕ್ಕುಗಳ ನ್ಯಾಯಾಲಯ, ಹುಳು ಬಿದ್ದಿದ್ದ ರವೆ ಮಾರಾಟ ಮಾಡಿದ್ದ ಪ್ರತಿಷ್ಠಿತ ಚಿಲ್ಲರೆ ಮಾರಾಟ ಮಳಿಗೆ ‘ಬಿಗ್ಬಜಾರ್'ಗೆ .10 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ತಾಕೀತು ಮಾಡಿದೆ.
ಗ್ರಾಹಕರೊಬ್ಬರಿಗೆ ಅವಧಿ ಮೀರಿರುವ ಮತ್ತು ಸೇವನೆಗೆ ಯೋಗ್ಯವಲ್ಲದ ರವೆ ಮಾರಾಟ ಮಾಡಿದ್ದ ಸಂಬಂಧ ಸಲ್ಲಿಕೆಯಾಗಿದ್ದ ದೂರು ವಿಚಾರಣೆ ನಡೆಸಿದ ಗ್ರಾಹಕರ ಹಕ್ಕು ಗಳ ನ್ಯಾಯಾಲಯದ ನ್ಯಾಯಾಧೀಶ ಪಿ.ವಿ. ಸಿಂಗ್ರಿ ಅವರಿದ್ದ ತ್ರಿಸದಸ್ಯ ಪೀಠ ಈ ಸೂಚನೆ ನೀಡಿದೆ. ಆಹಾರ ಭದ್ರತಾ ನಿಯಮಗಳ ಪ್ರಕಾರ ಗುಣಮಟ್ಟದ ಹಾಗೂ ಆರೋಗ್ಯಕ್ಕೆ ಹಾನಿಕರವಲ್ಲದ ಆಹಾರ ಪದಾರ್ಥಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬ ಕಟ್ಟು ನಿಟ್ಟಿನ ಸೂಚನೆಯಿದೆ. ಆದರೂ ಅವಧಿ ಮೀರಿರುವ ಪದಾರ್ಥಗಳ ಮಾರಾಟ ಮಾಡಿ ರುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಯಾಗಿದೆ. ಈ ರೀತಿ ಪ್ರಕರಣಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಅಲ್ಲದೆ, ಇಂತಹ ಆರೋಪ ಬಂದ ತಕ್ಷಣ ಗ್ರಾಹಕರಿಗೆ ಬದಲಿ ವಸ್ತು ನೀಡಬೇಕು. ಜತೆಗೆ ತಾವು ಮಾರಾಟ ಮಾಡುತ್ತಿರುವ ಪದಾರ್ಥಗಳ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಉಳಿಸಿಕೊ ಳ್ಳವಂತಿರಬೇಕು ಎಂದು ನಿರ್ದೇಶಿಸಿದೆ.
ಪ್ರಕರಣವೇನು?: ಕನಕಪುರ ರಸ್ತೆಯ ಕೋಣನಕುಂಟೆ ನಿವಾಸಿ ಪ್ರತೀಕ್ ಖಂಡೆವಾಲ ಜೆ.ಪಿ.ನಗರದಲ್ಲಿರುವ ಬಿಗ್ಬಜಾರ್ ಮಳಿಗೆ ಯಲ್ಲಿ 2015ರ ಡಿಸೆಂಬರ್ನಲ್ಲಿ 1 ಕೇಜಿಯ 2 ಪೊಟ್ಟಣಗಳ ರವೆ (ಗೋಲ್ಡನ್ ಹಾರ್ವೆಸ್ಟ್ ಸೋಜಿ) ಖರೀದಿಸಿದ್ದರು. ಅಡುಗೆ ತಯಾರಿಕೆ ವೇಳೆ ಪರಿಶೀಲಿಸಿದಾಗ ಪೊಟ್ಟಣದಲ್ಲಿ ಹುಳು ಬಿದ್ದಿರುವ ಅಂಶ ಬೆಳಕಿಗೆ ಬಂದಿತ್ತು.
ಇದನ್ನು ಬಿಗ್ಬಜಾರ್ ಮಳಿಗೆಗೆ ತಿಳಿಸಿ, ಬದಲಿ ವಸ್ತು ನೀಡುವಂತೆ ಇಮೇಲ್ ಮೂಲಕ ಸಂದೇಶ ರವಾನಿಸಿದ್ದಲ್ಲದೆ, ಖುದ್ದು ಭೇಟಿಯಾಗಿ ಮನವಿ ಮಾಡಿದ್ದರು. ಆದರೂ ಮಳಿಗೆಯವರು ಹಣವನ್ನೂ ನೀಡದೇ, ಬದಲಿ ವಸ್ತು ನೀಡಲಿಲ್ಲ. ಅಷ್ಟೇ ಅಲ್ಲದೆ, ರವೆ ಉತ್ಪಾದನೆ ಮಾಡುವ ಕಂಪನಿ ಫಕ್ಚರರ್ಸ್ ಕನ್ಸೂಮರ್ ಎಂಟರ್ಪ್ರೈಸಸ್ಗೂ ಪ್ರತೀಕ್ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸ್ಥೆ ಅಧಿಕಾರಿಗಳು ರವೆ ಪಡೆದಿರುವ ಮಳಿಗೆ ಯಲ್ಲಿ ಬದಲಿ ವಸ್ತು ಪಡೆಯಲು ಸೂಚಿ ಸಿದ್ದರು. ಬಿಗ್ಬಜಾರ್ನಿಂದ ಪ್ರತಿಕ್ರಿಯೆ ಬಾರದಿದ್ದಾಗ ಗ್ರಾಹಕರ ಹಕ್ಕುಗಳ ನ್ಯಾಯಾ ಲಯಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹುಳು ಬಿದ್ದಿರುವ ರವೆ ಪೊಟ್ಟಣ ಮತ್ತು ಖರೀ ದಿಸಿರುವ ಸಂಬಂಧದ ಬಿಲ್ ಪರಿಶೀಲಿಸಿತ್ತು. ಮಳಿಗೆ ಮಾರಾಟ ಮಾಡಿರುವ ರವೆ ಬಳಕೆಗೆ ಅನರ್ಹವಾಗಿತ್ತು ಎಂಬುದು ತಿಳಿದು ಬಂದಿತ್ತು. ಅಲ್ಲದೆ, ಅವಧಿ ಮುಗಿದ ಬಳಿಕ ಮಾರಾಟ ಮಾಡಿರುವುದು ಗೊತ್ತಾಗಿತ್ತು.
ವರ್ದಿ: ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.