ಮನ್ ಕೀ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ ನೋಟು ಅಮಾನ್ಯ ಕ್ರಮದ ಪರಿಣಾಮಗಳು, ಕಾಳಧನ, ನಗದು-ರಹಿತ ಆರ್ಥಿಕತೆ, ಕ್ರೀಡೆ ಮುಂತಾದ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಮನ್ ಕೀ ಬಾತ್'ನಲ್ಲಿ ಮಾತನಾಡಿದ ಪ್ರಧಾನಿ ನೋಟು ಅಮಾನ್ಯ ಕ್ರಮದ ಪರಿಣಾಮಗಳು, ಕಾಳಧನ, ನಗದು-ರಹಿತ ಆರ್ಥಿಕತೆ, ಕ್ರೀಡೆ ಮುಂತಾದ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಪ್ರಧಾನಿ ಮೋದಿ ಹೇಳಿರುವ ಪ್ರಮುಖ ವಿಷಯಗಳು ಇಲ್ಲಿವೆ:
1. ಭ್ರಷ್ಟಾಚಾರ ವಿರುದ್ಧ ಹೋರಾಟ:
ಇದು ಭ್ರಷ್ಟಾಚಾರ ವಿರುದ್ಧ ಹೋರಾಟದ ಆರಂಭವಷ್ಟೇ, ಅಂತ್ಯವಲ್ಲವೆಂದು ನಾನು ಭರವಸೆ ನೀಡುತ್ತೇನೆ.
2. ಕಾಳಧನಿಕರ ಮೇಲೆ ದಾಳಿಯ ರಹಸ್ಯ
ದೇಶದಾದ್ಯಂತ ಕಾಳಧನಿಕರನ್ನು ಮಟ್ಟ ಹಾಕಲಾಗುತ್ತಿದೆ. ರಹಸ್ಯದ ವಿಷಯವವೇನೆಂದರೆ, ಜನಸಾಮಾನ್ಯರು ನೀಡುವ ಮಾಹಿತಿ ಆಧಾರದಲ್ಲಿ ಸರ್ಕಾರವು ಕಾರ್ಯಪ್ರವೃತ್ತವಾಗಿದೆ.
3. ಜನಸಾಮಾನ್ಯರು ಅಭಿನಾಂದರ್ಹರು
ನೋಟು ಅಮಾನ್ಯ ಕ್ರಮದಿಂದ ಸಮಸ್ಯೆಗಳೆದುರಾಗಿದ್ದರೂ ಜನಸಾಮಾನ್ಯರು ಅದನ್ನು ಸಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ದಾರಿತಪ್ಪಿಸಲು ಪ್ರಯತ್ನಿಸುವವರಿಗೆ ತಕ್ಕ ಪ್ರತ್ತ್ಯುತ್ತರವನ್ನೂ ನೀಡುತ್ತಿದ್ದಾರೆ. ಅದಕ್ಕಾಗಿ ಅವರು ಅಭಿನಾಂದರ್ಹರು.
4. ಸಂಸತ್ತು ಕಲಾಪಗಳ ಬಗ್ಗೆ
ಸಂಸತ್ತು ಕಲಾಪಗಳು ಸುಗಮವಾಗಿ ನಡೆಯುತ್ತಿದ್ದರೆ ಬಹಳಷ್ಟು ವಿಷಯಗಳು ಚರ್ಚೆಗಳಾಗುತ್ತಿದ್ದವು. ಅದಾಗ್ಯೂ ವಿಕಲಚೇತನರ ಹಕ್ಕುಗಳ ಮಸೂದೆ ಅಂಗೀಕಾರಗೊಂಡಿತು.
5. ನಗದು-ರಹಿತ ವಹಿವಾಟಿನ ಬಗ್ಗೆ ಜನರಿಗೆ ಆಸಕ್ತಿ
ಜನರಿಗೆ ನಗದು-ರಹಿತ ವಹಿವಾಟಿನ ಬಗ್ಗೆ ತೀವ್ರ ಆಸಕ್ತಿಯಿದೆ. ಜನರು ಅದನ್ನು ಸ್ವೀಕರಿಸಬಯಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಜನಜಾಗೃತಿ ಹೆಚ್ಚುತ್ತಿದೆ.
6. ಗ್ರಾಹಕರಿಗೆ, ವರ್ತಕರಿಗೆ ಬಹುಮಾನ
ನಗದು-ರಹಿತ ವಹಿವಾಟನ್ನು ಉತ್ತೇಜಿಸಲು ಸರ್ಕಾರ ಿಂದು 2 ಯೋಜನೆಗಳನ್ನು ಆರಂಭಿಸಿದೆ. ಗ್ರಾಹಕರಿಗಾಗಿ 'ಲಕ್ಕಿ ಗ್ರಾಹಕ ಯೋಜನೆ', ಹಾಗೂ ವರ್ತಕರಿಗೆ 'ಡಿಜಿ-ಧನ್' ಯೋಜನೆಯನ್ನು ಪ್ರಾರಂಭಿಸಲಾಗಿದೆ.
7. ನಗದು-ರಹಿತ ವಹಿವಾಟಿನಲ್ಲಿ ಭಾರೀ ಏರಿಕೆ
ಇತ್ತೀಚೆಗೆ ನಗದು-ರಹಿತ ವಹಿವಾಟಿನಲ್ಲಿ 200 ರಿಂದ 300 ಶೇ. ಏರಿಕೆಯಾಗಿದೆ.
8. ಅಸ್ಸಾಮ್ ರಾಜ್ಯಕ್ಕೆ ಪ್ರಶಂಸೆ
ನಗದು-ರಹಿತ ಆರ್ಥಿಕತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಸ್ಸಾಮ್ ರಾಜ್ಯ ಕೈಗೊಂಡಿರುವ ಕ್ರಮಗಳು ಪ್ರಶಂಸಾರ್ಹವಾಗಿದೆ.
9. ಯುವಜನರಿಗೆ ಸುವರ್ಣಾವಕಾಶ
ಡಿಜಿಟಲ್ ವ್ಯವಹಾರಗಳು ಯುವಜನರಿಗೆ ಹಾಗೂ ಸ್ಟಾರ್ಟ್-ಅಪ್'ಗಳಿಗೆ ಸುವರ್ಣಾವಕಾಶ ಒದಗಿಸಿವೆ. ಆ ಮೂಲಕ ವರು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳಬಹುದು.
10. ಕ್ರೀಡಾಳುಗಳು ಭಾರತದ ಹೆಮ್ಮೆ
ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ದೇಶಕ್ಕೆ ಖ್ಯಾತಿ ತಂದಿದ್ದಾರೆ. ಕರುಣ್ ನಾಯರ್ ಮತ್ತು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸಾಧನೆಯನ್ನಂತೂ ಮನದುಂಬಿ ಪ್ರಶಂಸಿದರು.
