Asianet Suvarna News Asianet Suvarna News

ಪೊಲೀಸ್ ಕಾರ್ಯಾಚರಣೆಯಲ್ಲಿ 10 ಮಾವೋ ಉಗ್ರರ ಹತ್ಯೆ

ತೆಲಂಗಾಣ ಹಾಗೂ ಛತ್ತೀಸ್'ಘಡ ಪೊಲಿಸರು ಜಂಟಿ ಕಾರ್ಯಚರಣೆ ಕೈಗೊಂಡಿದ್ದವು. ಹತ್ಯೆಯಾದವರ ಬಳಿಯಿಂದ ಎಕೆ 47 ರೈಫಲ್, ಎಸ್'ಎಲ್'ಆರ್ ಹಾಗೂ ಐಎನ್'ಎಸ್'ಎಎಸ್ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

10 Maoists killed in Telangana encounter

ಹೈದರಾಬಾದ್(ಮಾ.02): ತೆಲಂಗಾಣ ಹಾಗೂ ಛತ್ತೀಸ್ಘಡ ಗಡಿಯಲ್ಲಿ ನಕ್ಸಲ್ ನಿಗ್ರಹ ದಳದ ಕಮಾಂಡೋ'ಗಳು ನಡೆಸಿದ ಕಾರ್ಯಾಚರಣೆಯಲ್ಲಿ 10 ಮಾವೋವಾದಿ ಉಗ್ರರು ಹತರಾಗಿದ್ದಾರೆ.

ತಡಪಲಗುಟ್ಟ-ಪೂಜಾರಿ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಡುವಿನ ಘರ್ಷಣೆಯಲ್ಲಿ ಓರ್ವ ಕಮಾಂಡೋ ಕುಡ ಹುತಾತ್ಮರಾಗಿದ್ದಾರೆ. ಹತ್ಯೆಯಾದವರಲ್ಲಿ 6 ಮಹಿಳೆಯರು ಒಳಗೊಂಡಿದ್ದು ಇಂದು ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಕಾರ್ಯಾಚರಣೆ ನಡೆದಿದೆ. ತೆಲಂಗಾಣ ಹಾಗೂ ಛತ್ತೀಸ್'ಘಡ ಪೊಲಿಸರು ಜಂಟಿ ಕಾರ್ಯಚರಣೆ ಕೈಗೊಂಡಿದ್ದವು. ಹತ್ಯೆಯಾದವರ ಬಳಿಯಿಂದ ಎಕೆ 47 ರೈಫಲ್, ಎಸ್'ಎಲ್'ಆರ್ ಹಾಗೂ ಐಎನ್'ಎಸ್'ಎಎಸ್ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ಹತ್ಯೆಯಾದವರಲ್ಲಿ ಸಿಪಿಐ ಮಾವೋದ ತೆಲಂಗಾಣ ರಾಜ್ಯ ಸಮಿತಿಯ ಕಾರ್ಯದರ್ಶಿ, ಕರೀಂ'ನಗರ ಜಿಲ್ಲಾ ವಿಭಾಗೀಯ ಸಮಿತಿ ಕಾರ್ಯದರ್ಶಿ ಸೇರಿದ್ದಾರೆ. ಉಳಿದವರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ. ಕಳೆದ 3 ದಿನಗಳಿಂದ 150ಕ್ಕೂ ಹೆಚ್ಚು ಮಾವೂ ಉಗ್ರರು ಸಭೆ ಸೇರಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸದ್ ಕಾರ್ಯಾಚರಣೆ ನಡೆಸಿತ್ತು.

ಇತ್ತೀಚಿನ ದಿನಗಳಲ್ಲಿ ಮಾವೋ ವಿರುದ್ಧ ಕೈಗೊಂಡ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ.  ಆದಾಗ್ಯೂ ಮಾವೋ ಚಿಂತಕ ಪಿ.ವರವರ ರಾವ್ ನಕಲಿ ಎನ್'ಕೌಂಟರ್ ಎಂದು ಟೀಕಿಸಿದ್ದಾರೆ.

Follow Us:
Download App:
  • android
  • ios