ಹುಬ್ಬಳ್ಳಿಯಲ್ಲಿ ಮೌಲ್ವಿ ವಿವಾದಾತ್ಮಕ ಹೇಳಿಕೆ ವಿಚಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಬಾಗಲಕೋಟೆಯಲ್ಲಿ ಮೌಲ್ವಿ ಹೇಳಿಕೆ ವಿರೋಧಿಸಿ ಬಿಜೆಪಿ ನಗರಘಟಕ ಪ್ರತಿಭಟನೆ ನಡೆಸಿದೆ.
ಬಾಗಲಕೋಟೆ (ಡಿ.04): ಹುಬ್ಬಳ್ಳಿಯಲ್ಲಿ ಮೌಲ್ವಿ ವಿವಾದಾತ್ಮಕ ಹೇಳಿಕೆ ವಿಚಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಬಾಗಲಕೋಟೆಯಲ್ಲಿ ಮೌಲ್ವಿ ಹೇಳಿಕೆ ವಿರೋಧಿಸಿ ಬಿಜೆಪಿ ನಗರಘಟಕ ಪ್ರತಿಭಟನೆ ನಡೆಸಿದೆ.
ಮೌಲ್ವಿ ತಲೆ ಕಡಿದು ತಂದವರಿಗೆ 10 ಲಕ್ಷ ಬಹುಮಾನ ಕೊಡುವುದಾಗಿ ಯುವಮೋಚಾ೯ ಪ್ರಧಾನ ಕಾಯ೯ದಶಿ೯ ಬಸವರಾಜ್ ಯಂಕಂಚಿ ಬಾಗಲಕೋಟೆಯಲ್ಲಿ ಘೋಷಿಸಿದ್ದಾರೆ. ಮೌಲ್ವಿಯನ್ನು ಕೂಡಲೆ ಬಂಧನ ಮಾಡುವಂತೆ ಬಿಜೆಪಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಇಲ್ಲಿನ ಗಣೇಶಪೇಟೆಯಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದ್ದು, ಪಾಕಿಸ್ತಾನವನ್ನು ಅಲ್ಲಿಗೇ ಹೋಗಿ ನೋಡಬೇಕೆಂದಿಲ್ಲ ಎಂದು ಮೌಲ್ವಿಯೊಬ್ಬರು ಹುಬ್ಬಳ್ಳಿಯಲ್ಲಿ ಶನಿವಾರ ಈದ್‌ಮಿಲಾದ್ ಆಚರಣೆ ವೇಳೆ ವಿವಾದಾತ್ಮಕ ಭಾಷಣ ಮಾಡಿರುವ ವಿಡಿಯೋ ಈಗ ವೈರಲ್ ಆಗಿತ್ತು.
