ಆಹಾರ ಕಲಬೆರಕೆಗೆ 10 ಲಕ್ಷ ದಂಡ, ಜೀವಾವಧಿ ಜೈಲು?

10 lakh penalty and life term imprisonment may imposed to food contamination scandal
Highlights

ದೇಶದ ಹಲವು ಪ್ರದೇಶಗಳಲ್ಲಿ ಆಹಾರ ಪದಾರ್ಥಗಳ ಕಲಬೆರಕೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ (ಎಫ್‌ಎಸ್ಎಸ್‌ಎಐ)ವು, ಆಹಾರ ಕಲಬೆರಕೆ ಪ್ರಕರಣಗಳ ದೋಷಿಗಳಿಗೆ ಕಠಿಣವಾದ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕುರಿತಾದ ಕಾನೂನು ಜಾರಿಗೊಳಿಸುವ
ಪ್ರಸ್ತಾಪವನ್ನು ಮಾಡಿದೆ. 

ನವದೆಹಲಿ (ಜೂ. 26): ದೇಶದ ಹಲವು ಪ್ರದೇಶಗಳಲ್ಲಿ ಆಹಾರ ಪದಾರ್ಥಗಳ ಕಲಬೆರಕೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ (ಎಫ್‌ಎಸ್ಎಸ್‌ಎಐ)ವು, ಆಹಾರ ಕಲಬೆರಕೆ ಪ್ರಕರಣಗಳ ದೋಷಿಗಳಿಗೆ ಕಠಿಣವಾದ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕುರಿತಾದ ಕಾನೂನು ಜಾರಿಗೊಳಿಸುವ ಪ್ರಸ್ತಾಪವನ್ನು ಮಾಡಿದೆ.

ಅಲ್ಲದೆ ಆಹಾರ ಉತ್ಪಾದಕರಿಗೆ, ಗುಣಮಟ್ಟದ ಆಹಾರ ಪದಾರ್ಥ ಉತ್ಪಾದನೆಗೆ ನೆರವಾಗಲು ನಿಧಿಯೊಂದನ್ನು ಸ್ಥಾಪಿಸುವಂತೆಯೂ ಸಲಹೆ ನೀಡಿದೆ.  ಈಗಾಗಲೇ ಆಹಾರ ಕಲಬೆರಕೆ ತಡೆಯುವ  ಕುರಿತು ಹಲವು ಕಾನೂನುಗಳು ಇದ್ದು, ಇದರ ಜೊತೆಗೆ ಇದೀಗ ಉದ್ದೇಶಪೂರ್ವಕವಾಗಿಯೇ  ಆಹಾರ ಪದಾರ್ಥಗಳಿಗೆ ಕಲಬೆರಕೆ ಮಾಡುವ ವ್ಯಕ್ತಿಗಳು ಅಥವಾ ಉದ್ಯಮಗಳಿಗೆ 10 ಲಕ್ಷ ರು. ದಂಡದ ಜೊತೆಗೆ ಕನಿಷ್ಠ 7 ವರ್ಷದಿಂದ  ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಹೊಸ ಅಂಶಗಳನ್ನು  ಕಾಯ್ದೆಗೆ ಸೇರಿಸುವಂತೆ ಪ್ರಾಧಿಕಾರ  ಶಿಫಾರಸು ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕಠಿಣ ನಿಯಮ  ಜಾರಿಗೆ ಪ್ರಸ್ತಾಪ ಸಲ್ಲಿಸಿದೆ. ಈ ಪ್ರಸ್ತಾಪದ ಕುರಿತು ಪ್ರಾಧಿಕಾರವು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು  ಆಹ್ವಾನಿಸಿದೆ. 


 

loader