ಬಶೀರ್ ಪುತ್ರ ವಿದೇಶದಿಂದ ಆಗಮಿಸಿದ ನಂತರ ರಾತ್ರಿ 7 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು. ಪುತ್ರ ಬರುವುದು ತಡವಾದರೆ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಮಂಗಳೂರು(ಜ.07): ಕೋಮುದ್ವೇಷದಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಾಪಾರಿ ಬಶೀರ್ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ದೀಪಕ್ ರಾವ್ ಹಾಗೂ ಬಶೀರ್ ನಿವಾಸಕ್ಕೆ ಮುಖ್ಯಮಂತ್ರಿ ಭೇಟಿ ನೀಡಿ ಸಾಂತ್ವನ ಹೇಳುವ ಸಾಧ್ಯತೆಯಿದೆ' ಎಂದು ಶಾಸಕ ಮೊಯಿದ್ದೀನ್ ಬಾಬಾ ತಿಳಿಸಿದ್ದಾರೆ.

ಬಶೀರ್ ಪುತ್ರ ವಿದೇಶದಿಂದ ಆಗಮಿಸಿದ ನಂತರ ರಾತ್ರಿ 7 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು. ಪುತ್ರ ಬರುವುದು ತಡವಾದರೆ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಮೃತದೇಹದ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಮೃತದೇಹವನ್ನು ಮೊದಲು ಆಕಾಶಭವನದ ನಿವಾಸಕ್ಕೆ ಕೊಂಡೊಯ್ಯಲಾಗುವುದು. ನಂತರ ಕುಳೂರು ಜುಮ್ಮಾ ಮಸೀದಿಯಲ್ಲಿ ಅಂತಿಮ ದರ್ಶನವಾದದ ನಂತರ ಜುಮ್ಮಾ ಮಸೀದಿಯಲ್ಲಿ ದಫನ್ ಮಾಡಲಾಗುವುದು. ಶಾಂತಿಯುತವಾಗಿ ಅಂತ್ಯಕ್ರಿಯೆ ನಡೆಸಲು ಎಲ್ಲರಿಗೂ ಮನವಿ ಮಾಡಿದ್ದೇವೆ' ಎಂದು ಶಾಸಕ ಮೊಯಿದ್ದೀನ್ ಬಾಬಾ ತಿಳಿಸಿದ್ದಾರೆ.