2008 ರ  ಬೆಂಗಳೂರು ಸರಣಿ ಬಾಂಬ್​ ಸ್ಟೋಟದ ಪ್ರಮುಖ ಆರೋಪಿ ಅಬ್ದುಲ್​​​ ನಾಸಿರ್​ ಮದನಿಗೆ ಸುಪ್ರಿಂಕೋರ್ಟ್​​10 ದಿನಗಳ ಕಾಲ  ಷರತ್ತು ಬದ್ದ  ಪೆರೋಲ್​​ ನೀಡಿದೆ .

ಬೆಂಗಳೂರು (ಆ.20): 2008 ರ ಬೆಂಗಳೂರು ಸರಣಿ ಬಾಂಬ್​ ಸ್ಟೋಟದ ಪ್ರಮುಖ ಆರೋಪಿ ಅಬ್ದುಲ್​​​ ನಾಸಿರ್​ ಮದನಿಗೆ ಸುಪ್ರಿಂಕೋರ್ಟ್​​10 ದಿನಗಳ ಕಾಲ ಷರತ್ತು ಬದ್ದ ಪೆರೋಲ್​​ ನೀಡಿದೆ .

ಕೇರಳದಲ್ಲಿ ತಮ್ಮ ಮಗನ ಮದುವೆಯಿರೋ ಕಾರಣ 10 ದಿನಗಳ ಕಾಲ ಪೆರೋಲ್​​ ನೀಡುವಂತೆ ಸುಪ್ರೀಂಕೋರ್ಟ್​​ಗೆ ಅಪರಾಧಿ ಮದನಿ ಮನವಿ ಮಾಡಿದ್ದ. ಮನವಿಯನ್ನ ಪರಿಗಣಿಸಿದ ಸುಪ್ರಿಂಕೋರ್ಟ್​​​ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದನಿಗೆ 10 ದಿನಗಳ ಕಾಲ ಪೆರೋಲ್​ ನೀಡಿದೆ . ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಮದನಿ ಪೊಲೀಸ್​​ ಭದ್ರತೆಯೊಂದಿಗೆ ಮಗನ ಮದುವೆ ಮಾಡೋದಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳಕ್ಕೆ ತೆರಳಿದ್ದಾರೆ.