ಪ್ರಧಾನಿ ಅವರ ಮೂಲ ಹಿಂದಿ ಭಾಷಣವನ್ನು 18 ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಸಾರ ಮಾಡಲಾಗುತ್ತದೆ. ಇದರ ಜತೆಗೆ ಇಂಗ್ಲಿಷ್ ಹಾಗೂ ಸಂಸ್ಕೃತ ಅವತರಣಿಕೆಗಳನ್ನೂ ಪ್ರಸಾರ ಮಾಡಲಾಗುತ್ತದೆ.

ನವದೆಹಲಿ(ಜು.20): ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಮಾಸಿಕ ರೇಡಿಯೋ ಭಾಷಣ ‘ಮನ್ ಕೀ ಬಾತ್’ನಿಂದ ಆಕಾಶವಾಣಿಗೆ ಕಳೆದ ಎರಡು ವಿತ್ತೀಯ ವರ್ಷದಲ್ಲಿ 10 ಕೋಟಿ ರು. ಆದಾಯ ಹರಿದುಬಂದಿದೆ.
2016-2017ರಲ್ಲಿ 5.19 ಕೋಟಿ ರು. ಹಾಗೂ 2015-16ರಲ್ಲಿ 4.78 ಕೋಟಿ ರು. ಆದಾಯ ಆಕಾಶವಾಣಿಗೆ ಈ ಕಾರ್ಯಕ್ರಮದ ಮೂಲಕ ಬಂದಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ ಸಿಂಗ್ ರಾಠೋಡ್ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಪ್ರಧಾನಿ ಅವರ ಮೂಲ ಹಿಂದಿ ಭಾಷಣವನ್ನು 18 ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಸಾರ ಮಾಡಲಾಗುತ್ತದೆ. ಇದರ ಜತೆಗೆ ಇಂಗ್ಲಿಷ್ ಹಾಗೂ ಸಂಸ್ಕೃತ ಅವತರಣಿಕೆಗಳನ್ನೂ ಪ್ರಸಾರ ಮಾಡಲಾಗುತ್ತದೆ. ಇಂಟರ್ನೆಟ್ ಹಾಗೂ ಶಾರ್ಟ್ವೇವ್ನಲ್ಲೂ ಭಾಷಣ ಲಭ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.
2014ರ ಅ.3ರಂದು ಮನ್ ಕೀ ಬಾತ್ ಭಾಷಣವನ್ನು ಮೋದಿ ಆರಂಭಿಸಿದ್ದರು. ಇದು ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುತ್ತದೆ.