ಖಲಿಸ್ತಾನ್‌ ಲಿಬರೇಶನ್‌ ಉಗ್ರ ಸಂಘಟನೆಗೆ ಸೇರಿದ ಹರ್ಮಿಂದರ್‌ ಸಿಂಗ್‌ ಮಿಂಟೂ ಮತ್ತು ಐವರು ಗ್ಯಾಂಗ್‌ ಸ್ಟರ್‌ಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಮಿಂಟೂವನ್ನು ಉಗ್ರ ಚಟುವಟಿಗಳ ಪ್ರಕರಣಗಳಲ್ಲಿ 2014 ರಲ್ಲಿ ಪಂಜಾಬ್‌ ಪೊಲೀಸರು ಬಂಧಿಸಿದ್ದರು. ಘಟನೆಯ ಬಳಿಕ ಪಂಜಾಬ್‌'ನಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.

ಪಂಜಾಬ್(ನ.27): ಸಿನಿಮೀಯ ಘಟನೆಯೊಂದರಲ್ಲಿ ಪಂಜಾಬ್‌'ನ ನಬಾ ಜೈಲಿಗೆ ಭಾನುವಾರ ಬೆಳಗ್ಗೆ ಪೊಲೀಸ್‌ ಸಮವಸ್ತ್ರ ಧರಿಸಿಕೊಂಡು ಬಂದ ಐವರು ಶಸ್ತ್ರಧಾರಿ ಆಗಂತುಕರು ಐವರು ಖಲಿಸ್ತಾನ್‌ ಉಗ್ರರರನ್ನು ಜೈಲಿನಿಂದ ಬಂಧಮುಕ್ತಗೊಳಿಸಿ ಕರೆದೊಯ್ದು ಭದ್ರತಾ ಸಿಬಂದಿಗಳ ನಿದ್ದೆಗೆಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಲಿಸ್ತಾನ್‌ ಲಿಬರೇಶನ್‌ ಉಗ್ರ ಸಂಘಟನೆಗೆ ಸೇರಿದ ಹರ್ಮಿಂದರ್‌ ಸಿಂಗ್‌ ಮಿಂಟೂ ಮತ್ತು ಐವರು ಗ್ಯಾಂಗ್‌ ಸ್ಟರ್‌ಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಮಿಂಟೂವನ್ನು ಉಗ್ರ ಚಟುವಟಿಗಳ ಪ್ರಕರಣಗಳಲ್ಲಿ 2014 ರಲ್ಲಿ ಪಂಜಾಬ್‌ ಪೊಲೀಸರು ಬಂಧಿಸಿದ್ದರು. ಘಟನೆಯ ಬಳಿಕ ಪಂಜಾಬ್‌'ನಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.

ಟೊಯೋಟಾ ಫಾರ್ಚುನರ್‌,ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡಾಯಿ ವೆರ್ನಾ ಕಾರುಗಳಲ್ಲಿ ಉಗ್ರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾದವರ ಪೈಕಿ ವಿಕಿ ಗೊಂಡಾರ್‌ ಎಂಬಾತ ಕುಖ್ಯಾತ ಗ್ಯಾಂಗ್‌'ಸ್ಟರ್‌ ಹಲವು ಪ್ರಕರಣಗಳಿಗೆ ಸಂಬಂಧಿಸಿ ಸಹಚರರೊಂದಿಗೆ ವಶಕ್ಕೆ ಪಡೆಯಲಾಗಿತ್ತು. ಮಿಂಟೂ ಪಾಕ್‌ ಸೇರಿದಂತೆ ವಿದೇಶಿದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ನಿಧಿ ಸಂಗ್ರಹಿಸುತ್ತಿದ್ದ ಎಂದು ತಿಳಿದು ಬಂದಿದೆ.