ಅಮೇಜಾನ್ ಕಂಪನಿ 1.30 ಕೋಟಿ ರು. ವಂಚನೆ

First Published 10, Mar 2018, 11:39 AM IST
1 crore Fraud To Amazon Company
Highlights

ಬೇರೆಯವರ ಹೆಸರಿನಲ್ಲಿ ಅಮೆಜಾನ್ ಕಂಪನಿಯಲ್ಲಿ ವಸ್ತುಗಳನ್ನು ಬುಕ್ಕಿಂಗ್ ಮಾಡಿ, ಅವುಗಳು ಬಂದ ಮೇಲೆ ನಕಲಿ ಡೆಬಿಟ್, ಕ್ರೆಡಿಟ್ ಕಾರ್ಡಗಳನ್ನು ಬಳಸಿ ಕಂಪನಿಯ ಸಿಬ್ಬಂದಿಯೇ 1.30 ಕೋಟಿ ರು.ಗೂ ಹೆಚ್ಚಿನ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು: ಬೇರೆಯವರ ಹೆಸರಿನಲ್ಲಿ ಅಮೆಜಾನ್ ಕಂಪನಿಯಲ್ಲಿ ವಸ್ತುಗಳನ್ನು ಬುಕ್ಕಿಂಗ್ ಮಾಡಿ, ಅವುಗಳು ಬಂದ ಮೇಲೆ ನಕಲಿ ಡೆಬಿಟ್, ಕ್ರೆಡಿಟ್ ಕಾರ್ಡಗಳನ್ನು ಬಳಸಿ ಕಂಪನಿಯ ಸಿಬ್ಬಂದಿಯೇ 1.30 ಕೋಟಿ ರು.ಗೂ ಹೆಚ್ಚಿನ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಕಂಪನಿಯ ಚಿಕ್ಕಮಗಳೂರು ವಿಭಾಗದ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್, ಸೇಲ್ಸ್ ಬಾಯ್‌ಗಳಾಗಿದ್ದ ತೇಜು, ತೀರ್ಥ, ಅನಿಲ್, ಸಚಿನ್, ಪುನೀತ್‌ರನ್ನು ಪೊಲೀಸರು ಬಂಧಿಸಿದ್ದಾರೆ.

ಬೇರೆಯವರ ಹೆಸರಿನಲ್ಲಿ ಅಮೆಜಾನ್ ಕಂಪನಿಯಲ್ಲಿ ದುಬಾರಿ ವಸ್ತುಗಳನ್ನು ಬುಕ್ ಮಾಡುತ್ತಿದ್ದ ಆರೋಪಿಗಳು, ಬಳಿಕ ಅವುಗಳನ್ನು ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರು. ತದನಂತರ ನಕಲಿ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಸ್ವೈಪ್ ಮಾಡುತ್ತಿದ್ದರು. ಇದರಿಂದ ಹಣ ಸಂದಾಯವಾಗಿದೆ ಎಂದು ಕಂಪನಿಯ ದತ್ತಾಂಶದಲ್ಲಿ ನಮೂದುಗೊಳ್ಳುತ್ತಿತ್ತು.

loader