ಯುದ್ಧೋಪಕರಣ ಖರೀದಿಗಾಗಿ ಸೇನೆಯಲ್ಲಿ 1.5 ಲಕ್ಷ ಹುದ್ದೆ ಕಡಿತ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Sep 2018, 8:18 AM IST
1.5 Lakh Job Cuts in Indian Army
Highlights

ಉದ್ಯೋಗ ಕಡಿತಕ್ಕೆ ಮುಂದಾದ ಭಾರತೀಯ ಸೇನೆ | 1.5 ಲಕ್ಷ ಜನರ ಉದ್ಯೋಗ ಕಡಿತ ಸಾಧ್ಯತೆ | ಸೇನಾ ಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಭವಿಷ್ಯದ ಯುದ್ಧಗಳಿಗೆ ಸನ್ನದ್ಧಗೊಳಿಸುವ
ಉದ್ದೇಶದೊಂದಿಗೆ ಸೇನಾ ಸಿಬ್ಬಂದಿ ಪರಿಶೀಲನೆ ಕಾರ್ಯಾಚರಣೆ ಆರಂಭ  

ನವದೆಹಲಿ (ಸೆ. 11): ಭಾರತೀಯ ಸೇನೆ ಈಗ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಪರಿಣಾಮವಾಗಿ ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಭಾರತೀಯ ಸೇನೆಯು ಯೋಧರ ಸಂಖ್ಯೆಯನ್ನು 1.50 ಲಕ್ಷದಷ್ಟು ಕಡಿತಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

ಸೇನಾ ಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಭವಿಷ್ಯದ ಯುದ್ಧಗಳಿಗೆ ಸನ್ನದ್ಧಗೊಳಿಸುವ ಉದ್ದೇಶದೊಂದಿಗೆ ಸೇನಾ ಸಿಬ್ಬಂದಿ ಪರಿಶೀಲನೆ ಕಾರ್ಯಾಚರಣೆಯನ್ನು ಸೇನೆ ಆರಂಭಿಸಿದೆ. ಜೂ.21 ರಂದು ಈ ಕುರಿತು ಆದೇಶವಾಗಿದ್ದು, ಲೆ|ಜ| ಜೆ.ಎಸ್. ಸಂಧು ನೇತೃತ್ವದಲ್ಲಿ 11 ಸದಸ್ಯರ ತಂಡ ರಚಿಸಲಾಗಿದೆ.

ಈ ತಂಡ ಮಾಸಾಂತ್ಯಕ್ಕೆ ಪ್ರಾಥಮಿಕ ಹಾಗೂ ನವೆಂಬರ್ಗೆ ಅಂತಿಮ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಸದ್ಯ ಸೇನೆಯಲ್ಲಿ 12 ಲಕ್ಷ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಘಟಕಗಳನ್ನು ವಿಲೀನಗೊಳಿಸಿದರೆ 2 ವರ್ಷಗಳಲಿ 50 ಸಾವಿರ ಉದ್ಯೋಗಗಳು ಕಡಿತವಾಗುತ್ತವೆ. 2022-23 ರ ವೇಳೆಗೆ ಇನ್ನೂ 1 ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸಬಹುದೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  

loader