ಕರುಳ ಕುಡಿ ನೋಡಲು ಬಿಡಿ’: ಡಬಲ್ ಏಜೆಂಟ್ ತಾಯಿಯ ಮೊರೆ!

First Published 22, May 2018, 11:48 AM IST
'Let me see him': Sergei's mother
Highlights

ಲಂಡನ್ ನಲ್ಲಿ ವಿಷಪ್ರಾಶನಕ್ಕೆ ತುತ್ತಾಗಿರುವ ರಷ್ಯಾದ ಮಾಜಿ ಡಬಲ್ ಏಜೆಂಟ್ ಸರ್ಜೆ ಸ್ಕ್ರಿಪಾಲ್ ಭೇಟಿಗೆ ಆತನ ತಾಯಿ ಮೊರೆ ಇಟ್ಟಿದ್ದಾಳೆ. ಕಳೆದ ೧೪ ವರ್ಷಗಳಿಂದ ಮಗನ ಮುಖವನ್ನೇ ನೋಡಿಲ್ಲ ಎಂದು ಗೋಳಿಟ್ಟಿರುವ ಆಕೆ, ಕರುಳ ಕುಡಿಯನ್ನು ಕಣ್ತುಂಬಿಕೊಳ್ಳಲು ಕಾನೂನಿನ ಅಪ್ಪಣೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಸರ್ಜೆಯ ಧ್ವನಿ ಕೇಳಿ ದಶಕಗಳೇ ಆಗಿದ್ದು, ಲಂಡನ್ ಅಧಿಕಾರಿಗಳ ವಶದಲ್ಲಿರುವ ಮಗನನ್ನು ಭೇಟಿ ಮಾಡಲು ಅನುವು ಮಾಡಿಕೊಡಿ ಎಂದು ಗೋಗರೆದಿದ್ದಾರೆ.

ಲಂಡನ್(ಮೇ. 22): ವಿಷಪ್ರಾಶನಕ್ಕೆ ತುತ್ತಾಗಿರುವ ರಷ್ಯಾದ ಮಾಜಿ ಡಬಲ್ ಏಜೆಂಟ್ ಸರ್ಜೆ ಸ್ಕ್ರಿಪಾಲ್ ಭೇಟಿಗೆ ಆತನ ತಾಯಿ ಮೊರೆ ಇಟ್ಟಿದ್ದಾಳೆ. ಕಳೆದ 14 ವರ್ಷಗಳಿಂದ ಮಗನ ಮುಖವನ್ನೇ ನೋಡಿಲ್ಲ ಎಂದು ಗೋಳಿಟ್ಟಿರುವ ಆಕೆ, ಕರುಳ ಕುಡಿಯನ್ನು ಕಣ್ತುಂಬಿಕೊಳ್ಳಲು ಕಾನೂನಿನ ಅಪ್ಪಣೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಸರ್ಜೆಯ ಧ್ವನಿ ಕೇಳಿ ದಶಕಗಳೇ ಆಗಿದ್ದು, ಲಂಡನ್ ಅಧಿಕಾರಿಗಳ ವಶದಲ್ಲಿರುವ ಮಗನನ್ನು ಭೇಟಿ ಮಾಡಲು ಅನುವು ಮಾಡಿಕೊಡಿ ಎಂದು ಗೋಗರೆದಿದ್ದಾರೆ.

ಯುರೋಪ್ ನಲ್ಲಿದ್ದ ರಷ್ಯನ್ ಏಜೆಂಟ್ ರಿಗೆ ಗುಪ್ತ ಮಾಹಿತಿ ರವಾನಿಸುತ್ತಿದ್ದ ಸರ್ಜೆ ನಂತರ ಡಬಲ್ ಏಜೆಂಟ್ ಆಗಿ ಪರಿವರ್ತನೆಯಾಗಿದ್ದರು. ನಂತರ ಲಂಡನ್ ಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದರು. ಮಾತೃದೇಶದ ವಿರುದ್ದವೇ ಬೇಹುಗಾರಿಕೆ ನಡೆಸಿದ ಆರೋಪ ಇವರ ವಿರುದ್ದ ಕೇಳಿ ಬಂದಿತ್ತು. ಕಳೆದ ಮೂರು ತಿಂಗಳ ಹಿಂದೆ ಸರ್ಜೆ ಮೇಲೆ ವಿಷಾನೀಲ ದಾಳಿ ಮಾಡಲಾಗಿತ್ತು. ಘಟನೆಗೆ ಬ್ರಿಟನ್ ಮತ್ತು ರಷ್ಯಾ ಪರಸ್ಪರ ಆರೋಪದಲ್ಲಿ ನಿರತವಾಗಿವೆ. ಈ ಮಧ್ಯೆ ಸರ್ಜೆ ಅವರನ್ನು ತಮ್ಮ ವಶಕ್ಕೆ ಪಡೆದಿರುವ ಅಧಿಕಾರಿಗಳು ಅವರ ಭೇಟಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ.

ಆದರೆ ಸರ್ಜೆ ತಾಯಿ ಭೇಟಿಗೆ ಮೊರೆ ಇಟ್ಟಿದ್ದು, ಬ್ರಿಟನ್ ಅನುಮತಿ ನೀಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ರಷ್ಯಾದ ಮಾಧ್ಯಮವೊಂದು ಸರ್ಜೆ ಅವರ ತಾಯಿಯ ಸಂದರ್ಶನ ನಡೆಸಿದ್ದು, ಈ ವಿಡಿಯೋ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಿದ ಬಳಿಕವೇ ಮುಂದಡಿ ಇಡುವುದಾಗಿ ಬ್ರಿಟನ್ ಸ್ಪಷ್ಟನೆ ನೀಡಿದೆ. 

loader