ಶ್ಯಾಮ್ ಶರ್ಮಾ (24), ದ್ರುವ (23) ಮತ್ತು ನಿಶಾಂತ್ (20) ಎನ್ನುವವರು ವಾಸಿ ರೈಲ್ವೆ ನಿಲ್ದಾಣದಲ್ಲಿ ಕೀಕಿ ಡಾನ್ಸ್‌ನ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.
ಮುಂಬೈ[ಆ.10]: ಚಲಿಸುತ್ತಿರುವ ಕಾರಿನಿಂದ ಇಳಿದು ನೃತ್ಯ ಮಾಡುವ ಕೀಕಿ ಚಾಲೆಂಜ್ ವಿಡಿಯೋವನ್ನು ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಸ್ಥಳೀಯ ಕೋರ್ಟ್‌ವೊಂದು ಮೂವರಿಗೆ ಮೂರು ದಿನ ವಾಸಿ ರೈಲ್ವೆ ನಿಲ್ದಾಣ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿದೆ.
ಶ್ಯಾಮ್ ಶರ್ಮಾ (24), ದ್ರುವ (23) ಮತ್ತು ನಿಶಾಂತ್ (20) ಎನ್ನುವವರು ವಾಸಿ ರೈಲ್ವೆ ನಿಲ್ದಾಣದಲ್ಲಿ ಕೀಕಿ ಡಾನ್ಸ್‌ನ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.
ಈ ವಿಡಿಯೋವನ್ನು 1.5 ಲಕ್ಷ ಮಂದಿ ವೀಕ್ಷಿಸಿದ್ದರು. ರೈಲ್ವೆ ರಕ್ಷಣಾ ಪಡೆಯ ಪೊಲೀಸರು ಮೂವರನ್ನು ಬಂಧಿಸಿ ವಾಸಿ ರೈಲ್ವೆ ಕೋರ್ಟ್‌ಗೆ ಹಾಜರುಪಡಿಸಿತ್ತು. ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಹಾಗೂ 3ರಿಂದ 5 ಗಂಟೆಯ ವರೆಗೆ 3 ದಿನ ರೈಲ್ವೆ ನಿಲ್ದಾಣ ಸ್ವಚ್ಛಗೊಳಿಸುವಂತೆ ಕೋರ್ಟ್ ಆದೇಶಿಸಿದೆ.