Asianet Suvarna News Asianet Suvarna News

ಮತ್ತೇ ಹಿಂದುತ್ವದ ಮಂತ್ರ ಜಪಿಸಿದ ರಾಹುಲ್ ಗಾಂಧಿ

ನನಗೆ ಬಿಜೆಪಿಯವರಿಗಿಂತ ಚೆನ್ನಾಗಿ ಹಿಂದುತ್ವ ತಿಳಿದುಕೊಂಡಿದ್ದಾನೆ. ಆದರೆ ಕೆಲವರಿಗೆ ಇದು ಅರ್ಥವಾಗುವುದಿಲ್ಲ. ಪ್ರತಿಯೊಬ್ಬರು ಹೊಂದಿರಬಹುದಾದ ಅತ್ಯಂತ ಪ್ರಮುಖವಾದ ಗುಣವೆಂದರೆ ನಮ್ರತೆ. ಹಾಗೆಂದರೆ ಯಾರಾದರೂ
ಮಾತನಾಡುತ್ತಿರುವಾಗ ನಾನು ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದರ್ಥ - ರಾಹುಲ್ ಗಾಂಧಿ

"I Understand Hinduism Better Than The BJP," Says Rahul Gandhi
Author
Bengaluru, First Published Oct 30, 2018, 7:43 PM IST

ನವದೆಹಲಿ[ಅ.30]: ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಿಂದುತ್ವದ ಮಂತ್ರ ಜಪಿಸಲು ಶುರು ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ನಾಲ್ಕನೇ ಬಾರಿ ಶತಾಯಗತಾಯ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂದು ಉದ್ದೇಶಿಸಿರುವ ಕಾಂಗ್ರೆಸ್ ಅಧ್ಯಕ್ಷ ಸಂಪ್ರದಾಯವಾದಿ ಹಿಂದೂ ಮತಗಳನ್ನು ಸೆಳೆಯಲು ಈಗಾಗಲೇ ಟೆಂಪಲ್ ರನ್ ಆರಂಭಿಸಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನನಗೆ ಬಿಜೆಪಿಯವರಿಗಿಂತ ಚೆನ್ನಾಗಿ ಹಿಂದುತ್ವ ತಿಳಿದುಕೊಂಡಿದ್ದಾನೆ. ಆದರೆ ಕೆಲವರಿಗೆ ಇದು ಅರ್ಥವಾಗುವುದಿಲ್ಲ. ಪ್ರತಿಯೊಬ್ಬರು ಹೊಂದಿರಬಹುದಾದ ಅತ್ಯಂತ ಪ್ರಮುಖವಾದ ಗುಣವೆಂದರೆ ನಮ್ರತೆ. ಹಾಗೆಂದರೆ ಯಾರಾದರೂ ಮಾತನಾಡುತ್ತಿರುವಾಗ ನಾನು ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದರ್ಥ. ಯಾರಾದರೂ ಕೋಪ ಮಾಡಿಕೊಂಡರೆ ನಾನು ಅವರನ್ನು ಹುಚ್ಚ ಎಂದು ಎಂದು ಸಂಭೋದಿಸುವುದಿಲ್ಲ. ಆತ ಏಕೆ  ಕೋಪಿಸುಕೊಳ್ಳುತ್ತಿದ್ದೇನೆ ಎಂದು ಮನನ ಮಾಡಿಕೊಳ್ಳುತ್ತೇನೆ. ಆದರೆ ಬಿಜೆಪಿ ಮಂದಿ ಹಿಂದೂ ಧರ್ಮದ ಬಗ್ಗೆ ಏನೇನು ತಿಳಿದುಕೊಂಡಿಲ್ಲ. ನಾನು ಅವರಿಗಿಂತ ಹೆಚ್ಚಾಗಿ ಹಿಂದೂ ಧರ್ಮದ ಬಗ್ಗೆ ಗೊತ್ತಿದೆ ಎಂದು ಧರ್ಮದ ಅಸ್ತ್ರವನ್ನು ಪ್ರಯೋಗಿಸಿದರು.

ಸಂಸತ್ತಿನ ಕಲಾಪವನ್ನು ಪ್ರಸ್ತಾಪಿಸಿದ  ರಾಹುಲ್ ಗಾಂಧಿ, ಬಿಜೆಪಿ, ಆರ್ ಎಸ್ ಎಸ್  ಮತ್ತು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಏನೆಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದರು. ಇದರ ಅರ್ಥ ಭಾರತೀಯನಾಗಿರು, ಹಿಂದೂ ಅಥವಾ ಶಿವ ಭಕ್ತನಾಗಿರುವುದೇ ಎಂದು ಪ್ರಶ್ನಿಸಿದರು. ಇನ್ನು ಕೆಲವೇ ವಾರಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಘಡ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಪ್ರಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಧರ್ಮದ ವಿಷಯವನ್ನೇ ಹೆಚ್ಚು ಪ್ರಸ್ತಾಪ ಮಾಡುತ್ತಿವೆ.        
 

Follow Us:
Download App:
  • android
  • ios