ಮುಂಬೈ(ಜೂ.01): ರಿಷಿ ಕಪೂರ್ ಹಾಗೂ ಇರ್ಫಾನ್ ಖಾನ್ ಕಳೆದುಕೊಂಡ ನೋವಿನಲ್ಲಿದ್ದ ಬಾಲಿವುಡ್‌ಗೆ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್(42) ನಿಧನದ ಸುದ್ದಿ ಮತ್ತೊಂದು ಆಘಾತ ನೀಡಿದೆ. ಇವರ ನಿಧನದಿಂದ ಸಿನಿಮಾ ಕ್ಷೇತ್ರದಲ್ಲಿ ಶೋಕ ಮಡುಗಟ್ಟಿದೆ. ಸಾಜಿದ್- ವಾಜಿದ್ ಜೋಡಿಯಾಗೇ ಇವರು ಬಹಳಷ್ಟು ಪ್ರಖ್ಯಾತರಾಗಿದ್ದರು.

ಒಂದು ವರದಿಯನ್ವಯ ವಾಜಿದ್ ಖಾನ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಾಗ ಅವರನ್ನು ಮುಂಬೈನ ಚೆಂಬುಯೆನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ತಿಂಗಳ ಹಿಂದಷ್ಟೇ ಕಿಡ್ನಿ ಕಸಿ ನಡೆಸಲಾಗಿತ್ತು. ಹೀಗಿದ್ದರೂ ಆರೋಗ್ಯ ಸುಧಾರಿಸಿರಲಿಲ್ಲ. ಹೀಗಿರುವಾಗಲೇ ಕೆಲ ದಿನಗಳ ಹಿಂದೆ ಪರೀಕ್ಷೆ ನಡೆಸಿದಾಗ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಭಾನುವಾರ ಸಂಜೆ ಅವರ ಆರೋಗ್ಯ ತೀವ್ರ ಹದಗೆಟ್ಟಿತತ್ತು. ಆದರೆ ಕಿಡ್ನಿ ಸಮಸ್ಯೆಯಿಂದ ಇಮ್ಯುನಿಟಿ ಲೆವೆಲ್ ಬಹಳಷ್ಟು ಕಡಿಮೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.