Sonu Nigam Tested Positive: ಕುಟುಂಬಕ್ಕೇ ಕೊರೋನಾ, ಹ್ಯಾಪಿ ಕೋವಿಡ್ ಫ್ಯಾಮಿಲಿ ಎಂದ ಗಾಯಕ
- ಸಿಂಗರ್ ಸೋನು ನಿಗಮ್‌ಗೆ ಕೊರೋನಾ ಪಾಸಿಟಿವ್ ದೃಢ
- ಪತ್ನಿ, ಪುತ್ರನಿಗೂ ಕೊರೋನಾ ಪಾಸಿಟಿವ್
- ಹ್ಯಾಪಿ ಕೊವೀಡ್ ಫ್ಯಾಮಿಲಿ ಎಂದ ಗಾಯಕ
ಪ್ರಸ್ತುತ ತಮ್ಮ ಕುಟುಂಬದೊಂದಿಗೆ ದುಬೈನಲ್ಲಿರುವ ಗಾಯಕ ಸೋನು ನಿಗಮ್ ಅವರು ತಮ್ಮ ಪತ್ನಿ, ಮಗ ಮತ್ತು ಸೊಸೆಯೊಂದಿಗೆ ವೆಕೇಷನ್‌ನಲ್ಲಿದ್ದಾರೆ. ತಮ್ಮ ಕುಟುಂಬಕ್ಕೆ ಕೋವಿಡ್ -19 ಗೆ ಪಾಸಿಟಿವ್ ದೃಢಪಟ್ಟಿರುವುದಾಗಿ ಅವರು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಗಾಯಕ ತನ್ನ ಆರೋಗ್ಯ ಮತ್ತು ಹೆಚ್ಚಿನ ವಿವರಗಳ ಕುರಿತು ಮಾತನಾಡಲು Instagram ನಲ್ಲಿ ವ್ಲಾಗ್ ಅನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್‌ಗೆ ಶೀರ್ಷಿಕೆಯಾಗಿ, #SonuLiveD | Vlog 141. ನಾನು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ವಿಸ್ತೃತ ಕುಟುಂಬಕ್ಕೆ 2022 ಹೊಸ ವರ್ಷದ ಶುಭಾಶಯಗಳು! #covid_19 #newyear #2022 #vlog ಎಂದು ಅವರು ಬರೆದಿದ್ದಾರೆ. ವೀಡಿಯೊದಲ್ಲಿ, ಅವರು ಹಲವಾರು ಬಾರಿ ಪರೀಕ್ಷಿಸಿದ ನಂತರವೂ ಅವರ ಕೋವಿಡ್ ಪರೀಕ್ಷೆಗಳು ಸಕಾರಾತ್ಮಕವಾಗಿವೆ. ಆದರೆ ಅವರ ರೋಗಲಕ್ಷಣಗಳು ಮೈಲ್ಡ್ ಆಗಿವೆ. ಅವರು ಯಾವುದೇ ಅನಾರೋಗ್ಯವನ್ನು ಅನುಭವಿಸುತ್ತಿಲ್ಲ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ 10 ಲಕ್ಷ ಕೇಸ್ ಒಂದೇ ದಿನ ದಾಖಲು: ವೈರಸ್ ಸ್ಫೋಟಕ್ಕೆ ಬೆಚ್ಚಿಬಿದ್ದ ಜನತೆ
ನಾವು ಅದರೊಂದಿಗೆ ಬದುಕಬೇಕು ಎಂದು ನಾನು ಭಾವಿಸುತ್ತೇನೆ. ಅನೇಕ ಬಾರಿ, ನಾನು ವೈರಲ್ ಜ್ವರದಿಂದ ಬಳಲುತ್ತಿರುವಾಗ, ಗಂಟಲು ನೋವು ಅಥವಾ ಸುಸ್ತಿನಿಂದ ಬಳಲುತ್ತಿರುವಾಗ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಅದಕ್ಕಿಂತ ಇದು ತುಂಬಾ ಬೆಟರ್ ಆಗಿದೆ, ನಾನು ಸಾಯುತ್ತಿಲ್ಲ, ಎಂದು ಅವರು ಹೇಳಿದರು. ತಾವು ಸ್ವಲ್ಪ ಹಾಡಲು ಹೋಗಿದ್ದು ಚೆನ್ನಾಗಿ ಹಾಡುತ್ತಿದ್ದೇನೆ, ತಾನು ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ.
ಪತ್ನಿ, ಮಗ ಸೇರಿದಂತೆ ಹಲವರಿಗೆ ಪಾಸಿಟಿವ್ ದೃಢಪಟ್ಟಿದ್ದು ಬಹಳ ದಿನಗಳಿಂದ ಭೇಟಿಯಾಗದ ಮಗನ ಜತೆ ಈಗ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿದೆ ಎಂದರು. ಇದು ಸಂತೋಷದ ಕೋವಿಡ್ ಕುಟುಂಬ, ಅವರು ಹೇಳಿದ್ದಾರೆ.
ಸೂಪರ್ ಸಿಂಗರ್ ಚಿತ್ರೀಕರಣಕ್ಕಾಗಿ ಭುವನೇಶ್ವರಕ್ಕೆ ಹೋಗಬೇಕಿತ್ತು ಆದರೆ ಅವರು ಕ್ವಾರಂಟೈನ್‌ನಲ್ಲಿರುವ ಕಾರಣ ಈಗ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ಸೋನು ಬಹಿರಂಗಪಡಿಸಿದ್ದಾರೆ. ಆದರೂ ಅವರು ತಮ್ಮ ಕಾರಣದಿಂದಾಗಿ ನಷ್ಟವನ್ನು ಅನುಭವಿಸಿದ ಜನರ ಬಗ್ಗೆ ದುಃಖಿತರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಶಾನ್ ಅವರನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಲಾಗಿದೆ ಮತ್ತು ಅನು ಮಲಿಕ್ ಅವರನ್ನು ಸೂಪರ್ ಸಿಂಗರ್ ಚಿತ್ರೀಕರಣಕ್ಕೆ ಬದಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಮಿಕ್ರೋನ್ ಸ್ಫೋಟ : ಸೋಂಕು ಭಾರಿ ಏರಿಕೆ
ಒಮಿಕ್ರೋನ್(Omicron) ಸೋಂಕು ಆಫ್ರಿಕಾ(Afirca), ಅಮೆರಿಕ(America), ಯುರೋಪ್(Europe) ದೇಶದಲ್ಲಿ ತೀವ್ರ ವೇಗದಲ್ಲಿ ಹಬ್ಬಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಹೊತ್ತಿನಲ್ಲೇ ರಾಜ್ಯದಲ್ಲೂ(Karnataka) ಕೊರೋನಾ ಸೋಂಕು ಅತಿ ವೇಗವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುನ್ನೂರರ ಆಸುಪಾಸಿನಲ್ಲಿದ್ದ ದೈನಂದಿನ ಸೋಂಕಿತರ ಸಂಖ್ಯೆ ಕೇವಲ ನಾಲ್ಕೇ ದಿನದಲ್ಲಿ ಈಗ ಸಾವಿರದ ಗಡಿ ದಾಟಿದೆ. ಪ್ರತಿದಿನ 200ರ ಅಸುಪಾಸಿಗೆ ಕುಸಿದಿದ್ದ ಕೊರೋನಾ(Coronavirus) ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಕಂಡಿದ್ದು ಮೊದಲೆರಡು ಅಲೆಗಳಿಗೆ ಹೋಲಿಸಿದರೆ ಕೊರೋನಾ ಸೋಂಕು ಅತ್ಯಂತ ವೇಗದಲ್ಲಿ ವ್ಯಾಪಿಸುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ.
ಮೊದಲ ಅಲೆಗೆ ಕಾರಣವಾಗಿದ್ದ ಆಲ್ಫಾ, ಬೀಟಾ ಮತ್ತು ಎರಡನೇ ಅಲೆಯನ್ನು ಸೃಷ್ಟಿಸಿದ್ದ ಡೆಲ್ಟಾಕ್ಕಿಂತ(Delta) ಮೂರನೇ ಅಲೆಗೆ ಕಾರಣವಾಗಬಹುದಾದ ಒಮಿಕ್ರೋನ್ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಈಗಾಗಲೇ ಸಾಂಕ್ರಾಮಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೊರೋನಾ ಟ್ಯಾಬ್ಲೆಟ್
ಕೊರೋನಾ (Corona ) ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾಗಿರುವ ‘ಮೊಲ್ನು ಪಿರಾವಿರ್’ ಮಾತ್ರೆ ಮುಂದಿನ ವಾರದಿಂದಲೇ ಮಾರುಕಟ್ಟೆಯಲ್ಲಿ (Market) ಲಭ್ಯವಾಗಲಿದೆ. ಒಂದು ಮಾತ್ರೆಗೆ (Tablet) 35 ರು. ದರ ನಿಗದಿಪಡಿಸಲಾಗಿದೆ. ಇದು ಅಮೆರಿಕ (America) ಮೂಲದ ಕಂಪನಿಯ ಮಾತ್ರೆಯಾಗಿದ್ದು, ಭಾರತದಲ್ಲಿ (India) ಬಿಡುಗಡೆ ಆಗುತ್ತಿರುವ ಮೊದಲ ಕೋವಿಡ್ (Covid 19) ಚಿಕಿತ್ಸಾ ಮಾತ್ರೆಯಾಗಿದೆ. ಕೋವಿಡ್‌ನಿಂದ ಗುಣಮುಖನಾಗಲು ಸೋಂಕಿತ ವ್ಯಕ್ತಿಯು 5 ದಿನಗಳಲ್ಲಿ 200 ಎಂ.ಜಿಯ 40 ಮಾತ್ರೆಗಳನ್ನು ಸೇವಿಸಬೇಕಿದ್ದು, ಪೂರ್ಣ ಚಿಕಿತ್ಸೆಗೆ ಒಟ್ಟು 1400 ರು. ವೆಚ್ಚವಾಗಲಿದೆ ಎಂದು ಮ್ಯಾನ್‌ಕೈಂಡ್ ಫರ್ಮಾ ಸಂಸ್ಥೆಯ ಅಧ್ಯಕ್ಷ ಆರ್.ಸಿ ಜುನೇಜಾ ತಿಳಿಸಿದ್ದಾರೆ.