ಗೋವಾ ಬೀಚ್‌ನಲ್ಲಿ ಸಾರಾ ತೆಂಡುಲ್ಕರ್ ಬಿಕಿನಿ ಲುಕ್ ವೈರಲ್
ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ತಮ್ಮ 27ನೇ ಹುಟ್ಟುಹಬ್ಬದ ನಂತರ ಗೋವಾದಲ್ಲಿ ಸ್ನೇಹಿತರೊಂದಿಗೆ ವಿಹಾರ ಮಾಡಿದ್ದಾರೆ. ಬಿಕಿನಿ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ ಈಗಾಗಲೇ ಜನಪ್ರಿಯರಾಗಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ಫಾಲೋವರ್‌ಗಳನ್ನು ಹೊಂದಿರುವ ಸ್ಟಾರ್‌ಕಿಡ್‌ಗಳ ಪೈಕಿ ಈಕೆಯೂ ಒಬ್ಬರು. ಆಕೆ ಎಲ್ಲಿ ಹೋದರು ಸುದ್ದಿಯಾಗುತ್ತದೆ. ರೆಸ್ಟೋರೆಂಟ್, ಪ್ರವಾಸ, ಜಿಮ್ ಎಲ್ಲಿಯೇ ಹೋದರು ಕ್ಯಾಮೆರಾ ಕಣ್ಣು ಸಾರಾ ಮೇಲಿರುತ್ತದೆ.ಆಕೆಯ ರಿಲೇಷನ್‌ಷಿಪ್ ಸ್ಟೇಟಸ್‌ಗಳು ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ಅಕ್ಟೋಬರ್ 12 ರಂದು ತಮ್ಮ 27ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದ ಫೋಟೋಗಳನ್ನು ಸಾರಾ ತೆಂಡುಲ್ಕರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಬಳಿಕ ತನ್ನ ಆತ್ಮೀಯ ಸ್ನೇಹಿತೆಯರ ಜೊತೆಗೂಡಿ ಅವರು ಗೋವಾಗೆ ಟ್ರಿಪ್ ಹೋಗಿದ್ದರು. ಗೋವಾದಲ್ಲಿ ಸಖತ್ ಎಂಜಾಯ್ ಮಾಡಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದರಲ್ಲಿ ಸಾರಾ ತೆಂಡುಲ್ಕರ್ ಅವರ ಬಿಕಿನಿ ಲುಕ್ ಎಲ್ಲರ ಗಮನಸೆಳೆದಿದೆ.
ಇನ್ಸ್‌ಟಾಗ್ರಾಮ್‌ನಲ್ಲಿ ಅವರು ಫೋಟೋ ಹಂಚಿಕೊಂಡಿದ್ದು, ಅದರಲ್ಲಿನ ಒಂದು ಚಿತ್ರದಲ್ಲಿ ಅವರು ಬಿಕಿನಿ ಧರಿಸಿದ್ದು ಕಂಡಿದೆ. ನೀಲಿ ಬಣ್ಣದ ಬಿಕಿನಿಯಲ್ಲಿ ಸಾರಾ ಲುಕ್ ಸಖತ್ ಆಗಿ ಕಂಡಿದೆ.ಇನ್ನು ಆಕೆಯ ಮುಖದಲ್ಲೂ ಡಿಫರೆಂಟ್ ಆದ ಗ್ಲೋ ಕಂಡಿದೆ.ಆಕೆಯ ಪೋಸ್ಟ್‌ಗೆ ಸಾಕಷ್ಟು ಲೈಕ್‌ಗಳೂ ಬಂದಿವೆ.
ಸಾರಾ ಹಂಚಿಕೊಂಡಿರುವ ಫೋಟೋಗಳಲ್ಲಿ ಆಕೆಯ ಸ್ನೇಹಿತೆಯರು ಕೂಡ ಇದ್ದಾರೆ.ಬೀಚ್‌ನಲ್ಲಿ ಮಕ್ಕಳಂತೆ ಅವರು ಆಟವಾಡಿದ್ದಾರೆ.ಫ್ಯಾನ್ಸ್ ಇದಕ್ಕೆ ಕಾಮೆಂಟ್ ಮಾಡಿದ್ದು, ಸಾರಾ ತೆಂಡುಲ್ಕರ್ ಮತ್ಸ್ಯ ಕನ್ಯೆ ರೀತಿ ಕಾಣ್ತಾ ಇದ್ದಾರೆ ಎಂದು ಬರೆದಿದ್ದಾರೆ. ಇನ್ನೂ ಕೆಲವರು ನಿಮ್ಮ ಸ್ಕಿನ್ ಇಷ್ಟು ಹೊಳಪಾಗಲು ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಆಕೆಯ ಪ್ರತಿ ಪೋಸ್ಟ್‌ನಲ್ಲೂ ಶುಭ್‌ಮನ್ ಗಿಲ್ ಕುರಿತಾಗಿ ಪ್ರಶ್ನೆಗಳು ಇದ್ದೇ ಇರುತ್ತದೆ. ಅದೇ ರೀತಿ ಈ ಪೋಸ್ಟ್‌ನಲ್ಲೂ ಶುಭ್‌ಮನ್ ಗಿಲ್ ಕುರಿತು ಪ್ರಶ್ನೆ ಪೋಸ್ಟ್ ಮಾಡಿದ್ದಾರೆ.
ಕನ್ನಡದ ಹೊಸ ತಲೆಮಾರಿನ ಲೇಖಕರು ಮತ್ತು ಅವರ ಓದಲೇಬೇಕಾದ ಒಂದು ಪುಸ್ತಕ!
ಸಾರಾ ತೆಂಡುಲ್ಕರ್ ತಮ್ಮ ಗುಡ್ ಲುಕ್ಕಿಂಗ್ ಕಾರಣಕ್ಕಾಗಿ ಹಲವಾರು ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಹಲವು ಬ್ರ್ಯಾಂಡ್‌ಗಳಿಗೆ ಸಾರಾ ತೆಂಡುಲ್ಕರ್ ರಾಯಭಾರಿಯೂ ಆಗಿದ್ದಾರೆ. ತಮ್ಮ ಗ್ಲಾಮರಸ್ ಲುಕ್ ಅನ್ನು ಪ್ರತಿ ಬಾರಿಯೂ ಅವರು ಪ್ರದರ್ಶನ ಮಾಡುತ್ತಾರೆ. ಅದಲ್ಲದೆ, ಬಾಲಿವುಡ್‌ನ ಸ್ಟಾರ್‌ಕಿಡ್‌ಗಳ ಜೊತೆಯೂ ಸಾರಾ ಕಾಣಿಸಿಕೊಳ್ಳುತ್ತಾರೆ. ಈವರೆಗೂ ಯಾವುದೇ ಸಿನಿಮಾ ಮಾಡದೆಯೂ ಸಾರಾ ಅವರೆಲ್ಲರಿಗಿಂತ ಹೆಚ್ಚಿನ ಜನಪ್ರಿಯತೆ ಹೊಂದಿದ್ದಾರೆ. ಸಾರಾ ಇತ್ತೀಚೆಗೆ ಆನ್‌ಲೈನ್ ಸ್ಟೋರ್‌ಅನ್ನು ಆರಂಭಿಸಿದ್ದಾರೆ. ಅದರೊಂದಿಗೆ ಕೊರಿಯಾದ ಬ್ಯೂಟಿ ಬ್ರ್ಯಾಂಡ್ ಲಾನಿಗ್‌ಗೆ ಸಾರಾ ತೆಂಡುಲ್ಕರ್ ಭಾರತದ ರಾಯಭಾರಿಯಾಗಿದ್ದಾರೆ.
Breaking: 545 ಪಿಎಸ್ಐಗಳ ತಾತ್ಕಾಲಿಕ ಪಟ್ಟಿ ಪ್ರಕಟ: ದೀಪಾವಳಿಗೆ ಗುಡ್ ನ್ಯೂಸ್