ಚೆನ್ನೈ (ಜೂ.13): ತಮಿಳು ಸಿನಿಮಾ ಥೇಗಿಡಿ, ಹೇ ಸಿನಾಮಿಕಾದಲ್ಲಿ ನಟಿಸಿದ್ದ ಪ್ರಖ್ಯಾತ ನಟ ಪ್ರದೀಪ್‌ ಕೆ ವಿಜಯನ್‌ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಮಿಳಿನ ಹಲವು ಸಿನಿಮಾಗಳಲ್ಲಿ ವಿಲನ್‌ ಹಾಗೂ ಕಾಮಿಡಿ ಪಾತ್ರಗಳಲ್ಲಿ ನಟಿಸಿದ್ದ ಪ್ರದೀಪ್‌ ಕೆ ವಿಜಯನ್‌, ಬುಧವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎರಡು ದಿನಗಳಿಂದ ಫೋನ್‌ ಮೂಲಕ ಸಂಪರ್ಕ ಮಾಡಲು ಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಕೊನೆಗೆ ಅವರು ಮನೆಗೆ ಬಂದು ನೋಡಿದಾಗ ಪ್ರದೀಪ್‌ ಅವರ ಮೃತದೇಹ ಬಿದ್ದಿರುವುದು ಕಂಡಿದೆ. ಸಾವಿಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದು, ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿದೆ.
ನಟ ಪ್ರದೀಪ್ ಅವಿವಾಹಿತರಾಗಿದ್ದು, ಚೆನ್ನೈನ ಪಾಲವಕ್ಕಂನಲ್ಲಿರುವ ಶಂಕರಪುರಂ ಫರ್ಸ್ಟ್‌ ಸ್ಟ್ರೀಟ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಅವರು ಇತ್ತೀಚೆಗೆ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆಯ ಸಮಸ್ಯೆಯ ಬಗ್ಗೆ ಮಾತನಾಡಿದ್ದರು. ಪ್ರದೀಪ್‌ಗೆ ಹಲವಾರು ಬಾರಿ ಕರೆ ಮಾಡಿದರೂ ಎರಡು ದಿನಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅವರ ಮನೆಗೆ ಹೋಗಿದ್ದರು.

ಮನೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಸ್ನೇಹಿತ ಸಾಕಷ್ಟು ಬಾರಿ ಫೋನ್‌ ಮಾಡಿದರೂ, ಉತ್ತರ ಬರದ ಹಿನ್ನಲೆಯಲ್ಲಿ ಪೊಲೀಸರಿಗೆ ಸ್ನೇಹಿತ ಮಾಹಿತಿ ನೀಡಿದ್ದ.  ಆ ಬಳಿಕ ನೀಲಂಕರೈ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಮನೆಯ ಬಾಗಿಲು ಒಡೆದಿದ್ದಾರೆ. ಈ ಹಂತದಲ್ಲಿ ಪ್ರದೀಪ್‌ ಅವರ ಶವ ಪತ್ತೆಯಾಗಿದ್ದು, ತಲೆಯ ಭಾಗದಲ್ಲಿ ಪೆಟ್ಟು ಕಾಣಿಸಿಕೊಂಡಿದೆ. ಪೊಲೀಸರು ಮೃತದೇಹವನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಎರಡು ದಿನಗಳ ಹಿಂದೆ ತಲೆಗೆ ಪೆಟ್ಟು ಬಿದ್ದು ಹೃದಯಾಘಾತದಿಂದ ಪ್ರದೀಪ್ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ನೀಲಂಕಾರೈ ಪೊಲೀಸರು ಸಾವಿನ ಕಾರಣವನ್ನು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಪ್ರದೀಪ್‌ ಅವರ ಸಾವಿನ ಬೆನ್ನಲ್ಲಿಯೇ ನಟ-ನಟಿಯರು ಆಘಾತ ವ್ಯಕ್ತಪಡಿಸಿದ್ದಾರೆ. ನಟಿ ಹಾಗೂ ಗಾಯಕಿ ಸೌಂದರ್ಯ ಬಾಲಾ ನಂದಕುಮಾರ್‌ ಟ್ವೀಟ್‌ ಮಾಡಿದ್ದು, ನಿಜಕ್ಕೂ ಇದು ಆಘಾತಕಾರಿ ವಿಚಾರ. ಒಬ್ಬ ಸಹೋದರನ ರೀತಿಯಲ್ಲಿ ನನಗೆ ಆಪ್ತರಾಗಿದ್ದರು. ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದಿದ್ದಾರೆ.

'ನನಗೆ ಶಾಪ ಹಾಕಿದ್ರೆ ಯಾವ ಬದಲಾವಣೆಯೂ ಆಗಲ್ಲ..' ದರ್ಶನ್‌ ಪುತ್ರ ವಿನೀಶ್‌ ಪೋಸ್ಟ್‌!

ಪ್ರದೀಪ್ ನಾಯರ್ ಪಪ್ಪು ಎಂದು ಜನಪ್ರಿಯವಾಗಿದ್ದ ಪ್ರದೀಪ್, 2013 ರ ಕೃಷ್ಣನ್ ಜಯರಾಜ್ ನಿರ್ದೇಶನದ ಸೊನ್ನ ಪುರಿಯಾತು ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪಿ ರಮೇಶ್ ಅವರ 2014 ರ ಅಶೋಕ್ ಸೆಲ್ವನ್ ಮತ್ತು ಜನನಿ-ನಟಿಸಿದ ತೇಗಿಡಿಯಲ್ಲಿ ಪೂರ್ಣಚಂದ್ರನ್ (ಸಡಗೋಪ್ಪನ್) ಪಾತ್ರದಿಂದ ಅವರು ಪ್ರಖ್ಯಾತಿಗೇರಿದ್ದರು. ಚಿತ್ರದಲ್ಲಿ ಅವರು ಪತ್ತೇದಾರಿ ಪಾತ್ರವನ್ನು ನಿವರ್ಹಿಸಿದ್ದರು. ರಾಘವ ಲಾರೆನ್ಸ್ ಅವರೊಂದಿಗೆ ಎಸ್ ಕತಿರೇಸನ್ ಅವರ 2023 ರ ಚಿತ್ರ ರುದ್ರನ್ ಅವರ ಕೊನೆಯ ಚಿತ್ರ. ಪ್ರದೀಪ್ ಟೆಕ್ ಪದವೀಧರರಾಗಿದ್ದು, ನಟನೆಯ ಮೇಲಿನ ಉತ್ಸಾಹದಿಂದಾಗಿ ಕಾಲಿವುಡ್‌ನಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು.

ಆರೋಪಿಗಳಿಗೆ ಠಾಣೆಯಲ್ಲೇ ಸ್ಮೋಕಿಂಗ್‌ ಜೋನ್‌? 'ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು..' ಮಾತು ಸಾಬೀತಾಯ್ತು!