Asianet Suvarna News Asianet Suvarna News

ಭಜರಂಗಿ-2 ಚಿತ್ರೀಕರಣದಲ್ಲಿ ಮತ್ತೆ ಅಗ್ನಿ ಅವಘಡ: ಒಂದೇ ವಾರದಲ್ಲಿ 3 ಕಂಟಕಗಳು

ನಟ ಶಿವರಾಜ್​ಕುಮಾರ್​ ಅಭಿನಯದ ಭಜರಂಗಿ-2 ಚಿತ್ರ ಸೆಟ್ಟೇರಿ ಸಿನಿಮಾ ಫಸ್ಟ್​ ಫೋಸ್ಟರ್​ ಬಿಡುಗಡೆಯಾದ ದಿನದಿಂದ ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ. ಒಂದರ ಮೇಲೊಂದಂತೆ ಮೂರು ಕಂಟಕಗಳು ಎದುರಾಗಿವೆ.

Once Again  Fire breaks out In shivarajkumar Kannada Movie bajarangi-2 set at Bengaluru
Author
Bengaluru, First Published Jan 19, 2020, 6:25 PM IST
  • Facebook
  • Twitter
  • Whatsapp

ಬೆಂಗಳೂರು, [ಜ.19]:  ಭಜರಂಗಿ-2 ಚಿತ್ರದ ಮುಹೂರ್ತ ಅದ್ಯಾಕೋ ಚೆನ್ನಾಗಿದಂಗಿಲ್ಲ ಅನ್ಸುತೆ. ಚಿತ್ರೀಕರಣದ ವೇಳೆ ಒಂದರ ಮೇಲೊಂದಂತೆ ಮೂರು ಅವಘಡಗಳು ನಡೆದಿವೆ.

ಮೊದಲು ಚಿತ್ರೀಕರಣದ ವೇಳೆ ಅಗ್ನಿ ಅವಘಡ ಸಂಭವಿಸಿತ್ತು. ಇದಾದ ಬಳಿಕ ಭಜರಂಗಿ-2 ಚಿತ್ರದ ಕಲಾವಿದರ ತಂಡ ತೆರಳುತ್ತಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕೆ ಹೊಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಇದೀಗ ಇಂದು [ಭಾನುವಾರ] ಮತ್ತೆ ಅಗ್ನಿ ದುರಂತ ಸಂಭವಿಸಿದೆ.

ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ; ಭಜರಂಗಿ ಚಿತ್ರದ 60 ಕಲಾವಿದರು ಪಾರು!

ಚಿತ್ರೀಕರಣಕ್ಕಾಗಿ ನೆಲಮಂಗಲ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರತಂಡ ಬೃಹತ್​ ಸೆಟ್​ ನಿರ್ಮಿಸಿದೆ. ಈ ಸೆಟ್​ಗೆ ಇಂದು [ಭಾನುವಾರ] ಮತ್ತೆ ಬೆಂಕಿ ಬಿದ್ದಿದ್ದು, ಇದರಿಂದ ಸೆಟ್​ ಸಂಪೂರ್ಣ ಭಸ್ಮವಾಗಿದೆ. ಆದ್ರೆ  ಬಾರಿಯು ಚಿತ್ರತಂಡ ಅವಘಡದಿಂದ ಪಾರಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಚಿತ್ರ ತಂಡ ಸುವರ್ಣನ್ಯೂಸ್ ಗೆ ಮಾಹಿತಿ ನೀಡಿದೆ. ಈ ಅವಘಡದ ವೇಳೆ  ಶಿವರಾಜಕುಮಾರ್ ಸಹ ಸೆಟ್ ನಲ್ಲಿ ಇದ್ದರು. 

ಶಿವಣ್ಣನ ಸೆಟ್‌ನಲ್ಲಿ ಬೆಂಕಿ; ಪ್ರಾಣಾಪಾಯದಿಂದ 'ಭಜರಂಗಿ' ಪಾರು!

3 ದಿನಗಳ ಹಿಂದಷ್ಟೇ  ಇದೇ ಬೃಹತ್​ ಸೆಟ್​ಗೆ ಬೆಂಕಿ ಬಿದ್ದಿತ್ತು. ಅದೃಷ್ಟವಶಾತ್​ ಯಾರಿಗೂ ಏನೂ ಆಗಿರಲಿಲ್ಲ. ಇದಾದ ಬಳಿಕ  ಮೋಹನ್​ ಬಿ ಕೆರೆ ಸ್ಟುಡಿಯೋಗೆ ಬೆಂಗಳೂರಿನಿಂದ ಕಲಾವಿದರು ಸಂಚರಿಸುತ್ತಿದ್ದ ಬಸ್,​ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್​ ಕಂಬಕ್ಕೆ ಅಪ್ಪಳಿಸಿ ನಿಂತಿತ್ತು. 

ಬಸ್​ ಅಪ್ಪಳಿಸಿದ ರಭಸಕ್ಕೆ ವಿದ್ಯುತ್​ ಕಂಬ ಹಾಗೂ ವಿದ್ಯುತ್​​ ತಂತಿ ತುಂಡಾಗಿ ಬಸ್​ ಮೇಲೆ ಬಿದ್ದಿತ್ತು. ಎರಡನೇ ಬಾರಿಯೂ ಪ್ರಾಣಾಪಾಯದಿಂದ ಕಲಾವಿದರು ಪಾರಾಗಿದ್ದರು.

ಇದೀಗ ಚಿತ್ರತಂಡ ಮತ್ತೊಮ್ಮೆ ಅವಘಡವನ್ನು ಎದುರಿಸಿದೆ.  ಒಟ್ಟಿನಲ್ಲಿ ಭಜರಂಗಿ-2 ಚಿತ್ರ ತಂಡ ಒಂದೇ ವಾರದಲ್ಲಿ 3 ಕಂಟಕಗಳನ್ನು ಎದುರಿಸಿದೆ. 

"

 

Follow Us:
Download App:
  • android
  • ios