ಮೈಸೂರು[ಫೆ.27]: ಅರ್ಜುನ್ ಜನ್ಯಾಗೆ ಲಘು ಹೃದಯಾಘಾತ ಸಂಭವಿಸಿದೆ.ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

"

ಸಂಗೀತ ಲೋಕದ ಮಾಂತ್ರಿಕ ಅರ್ಜುನ್ ಜನ್ಯಾಗೆ ಬುಧವಾರ ರಾತ್ರಿ ಲಘು ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗಾಗಿ ಮೈಸೂರಿನ  ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜನ್ಯಾ ಅನಾರೋಗ್ಯದ ಸುದ್ದಿ ಅಭಿಮಾನಿಗಳಲ್ಲಿ ಆತಂಕವುಂಟು ಮಾಡಿದೆ.

ನೂರು ಸಿನಿಮಾಗಳ ಸಂಗೀತ ಸರದಾರ ಅರ್ಜುನ್‌ ಜನ್ಯಾ !

ಜನ್ಯಾಗೆ ಆಂಜಿಯೋಪ್ಲ್ಯಾಸ್ಟಿ ಹಾಗೂ ಆಂಜಿಯೋಗ್ರಾಂ ಚಿಕಿತ್ಸೆ ನೀಡಲಾಗಿದ್ದು, ಅವರು ಈ ಎರಡೂ ಎರಡು ಚಿಕಿತ್ಸೆಗೆ ಸ್ಪಂದಿಸಿದ್ದಾರೆನ್ನಲಾಗಿದೆ.

ಸದ್ಯ ಅರ್ಜುನ್ ಜನ್ಯ ಆರೋಗ್ಯ ಸ್ಥಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು 10 ಗಂಟೆಗೆ ಅಪೋಲೋ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ನೋಡಿ | ಇಂದಿನ ಚಿನ್ನ-ಬೆಳ್ಳಿ ದರ, ಪೆಟ್ರೋಲ್-ಡೀಸೆಲ್ ಬೆಲೆ:

"