ಮುಂಬೈ[ಜ. 27]  ಜಗತ್ತೇ ಮೆಚ್ಚಿಕೊಂಡ ಸಿನಿಮಾ 'ಮಿಷನ್ ಮಂಗಲ್'. ಈ ಚಿತ್ರದ ನಿರ್ದೆಶಕ ಜಗನ್ ಶಕ್ತಿ ನಮ್ಮ ಕನ್ನಡದವರು. ಆದರೆ ಅದೇ ನಿರ್ದೇಶಕ ಇಂದು ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಸೀರಿಯಸ್ ಕಂಡಿಶನ್ ನಲ್ಲಿದ್ದ ಅವರನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇನ್ನೊಂದು ಮೂಲದ ಪ್ರಕಾರ ಸ್ನೇಹಿರೊಂದಿಗೆ ಮಾತನಾಡುತ್ತ ಇದ್ದಾಗಲೇ ನಿರ್ದೇಶಕ ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕುಟುಂಬದವರ ನೆರವಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಮಗು ಬೇಕೆಂದಾಗ ಮದುವೆ ಆಗ್ತೇನೆ ಎಂದ ಬಾಲಿವುಡ್ ಬ್ಯೂಟಿ

ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಮಂಗಳಯಾನ ಕುರಿತು 'ಮಿಷನ್ ಮಂಗಲ್' ವಿವರಿಸುವ ಕತೆ ಹೊಂದಿತ್ತು. ಭಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಚಿತ್ರ ಕೆಲವೇ ದಿನದಲ್ಲಿ 200 ಲೋಟೊ ಗಳಿಸಿತ್ತು.

ಕನ್ನಡದ ಹಿರಿಯ ನಟ ದತ್ತಣ್ಣ, ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.  
ಮಿಶನ್ ಮಂಗಲ್ ಚಿತ್ರ ನಿರ್ದೇಶಕ ಹಿಂದೊಮ್ಮೆ ನಮ್ಮ ಕನ್ನಡದ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದರು. ಚಿತ್ರವನ್ನು ಹಾಡಿ ಹೊಗಳಿದ್ದ ನಿರ್ದೇಶಕ ಯಶ್ ಗೆ ಮೆಚ್ಚುಗೆ ಸೂಚಿಸಿದ್ದರು.