Asianet Suvarna News Asianet Suvarna News

ಯಕ್ಷ ಕಲೆಗೆ ಜೀವ ತುಂಬ ಬಲ್ಲ ಅಪೂರ್ವ ಪ್ರತಿಭೆ ಯೋಗೀಶ್ ಶೆಟ್ಟಿ

ಹರೀಶ ವಯಸ್ಸು 36- ಚಿತ್ರದಲ್ಲಿ ನಟಿಸಿರುವ ಯೋಗೀಶ್ ಶೆಟ್ಟಿ ಯಕ್ಷರಂಗದಲ್ಲೂ ಹೆಸರು ಮಾಡುತ್ತಿದ್ದಾರೆ. ಇವರ ಬಹುಮುಖ ಪ್ರತಿಭೆ ಕುರಿತ ಕಿರುಚಿತ್ರಣ ಇಲ್ಲಿದೆ.

meet multi talented Yakshagana artist Yogish Shetty
Author
Bangalore, First Published Mar 16, 2022, 1:25 PM IST | Last Updated Mar 16, 2022, 3:16 PM IST

ಮುಖವೆಲ್ಲಾ ಬಣ್ಣ ಬಳಿದು ಭಾರವಾದ ವೇಷ ತೊಟ್ಟು ಬಾಯ್ತುಂಬ ಪುರಾತನ ಕಥೆಯನಾಡಿ ಭೂಮಿ ಅದುರುವ ನಟನ ವಾಡಿ ಮುಖ ಭವನದಲ್ಲಿ ಕಥೆಯನ್ನು ಹೇಳುವ ಯಕ್ಷಗಾನ ಕಲಾವಿದನಾಗಿ ಗುರುತಿಸಿಕೊಂಡಿರುವ ವ್ಯಕ್ತಿ ಯೋಗೇಶ್ ಶೆಟ್ಟಿ.

ಇವರು ಮೂಲತಃ ಕಾಸರಗೋಡು ಜಿಲ್ಲೆಯ ಮಂಚೇಶ್ವರ  ತಾಲೂಕಿನ ಕಡಂಬಾರು ಗ್ರಾಮದವರು. ಆನಂದ ಶೆಟ್ಟಿ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರ. ತಮ್ಮ ಪದವಿ ಮತ್ತು ಎಂಎಸ್‌ಡಬ್ಲೂ  ಶಿಕ್ಷಣವನ್ನು ಮಂಗಳೂರಿನಲ್ಲಿ ಮುಗಿಸಿದರು.

ರಂಗಭೂಮಿಯಲ್ಲಿ ಬಣ್ಣ ಹಚ್ಚಿ ಪಾತ್ರಗಳಿಗೆ ಜೀವ ತುಂಬುವ ಕಲೆ ಇವರಿಗೆ ರಕ್ತ ಗತವಾಗಿ ಒಲಿದು ಬಂದಿರುವ ವರ. ನಟನೆ ಮತ್ತು ಯಕ್ಷಗಾನ ಕಡೆಗಿನ ಆಸಕ್ತಿಯನ್ನು ಬೆಳೆಸಿಕೊಂಡತಹ ಯೋಗೀಶ್ ಅವರನ್ನು ರಂಗಭೂಮಿಯ ಕಲೆ ಅಯಸ್ಕಾಂತದಂತೆ ಸೆಳೆಯಿತು. ಯಕ್ಷಗಾನದ ವೇಷ ತೊಟ್ಟು ವೇದಿಕೆಯಲ್ಲಿ ನಟಿಸಬೇಕೆಂಬ ಆಸೆಯ ಹಕ್ಕಿಗೆ ರೆಕ್ಕೆ ಕಟ್ಟಿ ಹಾರಲು ರಂಗ ಕ್ಷೇತ್ರ ಸೇತುವೆಯಾಯಿತು ಎನ್ನುತ್ತಾರೆ ಯೋಗೀಶ್.

'ಪ್ರೌಢ ಶಿಕ್ಷಣ ಕಲಿಯುತ್ತಿರುವ ಸಮಯದಲ್ಲಿ ನನಗೆ ಯಕ್ಷಗಾನದ ಗೀಳು ಬಂತು'
ಯಕ್ಷಗಾನದ ಮೇರು ಕಲಾವಿದ ಕುರಿಯ ವಿಠಲ ಶಾಸ್ತ್ರಿ ಅವರ ಹೆಸರನೊಳ್ಳಗೊಂಡ ಕುರುಡ ಪದವು ಶಾಲೆಯಲ್ಲಿ ಕಲಿತ ಇವರಿಗೆ ಯಕ್ಷಗಾನದ ಕಲೆ ಒಲಿಯಿತು. ಯೋಗೀಶ್ ಅವರ ಅಜ್ಜ ಕರುವೋಳು ದೇರಣ್ಣ ಶೆಟ್ಟಿ ಪ್ರಖ್ಯಾತ ತೆಂಕುತಿಟ್ಟು ಯಕ್ಷಗಾನ ಕಲಾವಿದರಾಗಿ, ಯಕ್ಷಗಾನವನ್ನು ಜೀವನವಾಗಿಸಿಕೊಂಡವರು.

Karnataka Film Chamber Of Commerce: ಫಿಲಂ ಚೇಂಬರ್‌ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಯತ್ನದ ಹಾದಿಯಲ್ಲಿ
ಶಿಕ್ಷಣದ ಜೊತೆಗೆ ನಾಟಕ ಹಲವಾರು ಕಾಲೇಜುಗಳಲ್ಲಿ ಏರ್ಪಡಿಸುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡು ರಂಗ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಸಾಗುತ್ತಿದ್ದಾರೆ.
ಎಂ ಎಸ್ ಡಬ್ಲೂ ಮಾಡುವ ಸಂದರ್ಭದಲ್ಲಿ ಮಂಗಳೂರಿನ ಉಳ್ಳಾಲದ ಮೆರಿಡಿಯನ್ ಕಾಲೇಜಿನಲ್ಲಿ ನಡೆದ ಬೀದಿ ನಾಟಕ ಮತ್ತು ಸಂವಹನ ಕಲೆ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಬಂದ ಜಗನ್ ಪವಾರ್ ಅವರ ಸಂದೇಶದ ಮಾತು ಯೋಗೀಶ್ ಅವರು ಮನಸೋಲುವಂತೆ ಮಾಡುವುದರ ಜೊತೆಗೆ, ಅನೇಕ ವಿಷಯಗಳನ್ನು ರೋಡಿಸಿಕೊಳ್ಳುತ್ತಾರೆ. ಅವರಲ್ಲಿ ಒಡನಾಟವನ್ನು ಬೆಳೆಸಿಕೊಂಡು ಸಂಕೇತ ಎಂಬ ನಾಟಕ ತಂಡದ ಕುಟುಂಬದಲ್ಲಿ ಇವರೂ ಒಬ್ಬ ಸದಸ್ಯನಾಗಿ ಸೇರಿಸಿಕೊಳ್ಳುತ್ತಾರೆ. 
ಬಾಂಬೆಯಲ್ಲಿ ನಡೆದ ಕುವೆಂಪು ಕನ್ನಡ ನಾಟಕೋತ್ಸಕ್ಕೆ ಮಂಗಳೂರಿನ ತಂಡದೊಂದಿಗೆ ಇವರು ಪಾಲ್ಗೊಂಡರು. ಹಲವಾರು ಜಿಲ್ಲೆ ರಾಜ್ಯಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ,ಪ್ರಶಸ್ತಿಗಳ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. 

Puneeth Rajkumar ಹುಟ್ಟುಹಬ್ಬಕ್ಕೆ ಕ್ಷಣಗಣನೆ: 4000 ಚಿತ್ರಮಂದಿರಗಳಲ್ಲಿ 'ಜೇಮ್ಸ್‌' ಬಿಡುಗಡೆ

ಗುರುವಿನ ಮಾರ್ಗದರ್ಶನದಲ್ಲಿ ಪಯಣ
ಕಾಲೇಜು ರಂಗ ಶಿಕ್ಷಣಕ್ಕೆ ಹೆಸರುವಾಸಿಯಾದ ಜಗನ್ ಪವಾರ್ ಬೇಕಲ್ ಅವರು ಕಲಿಸಿದ ರಂಗ ಕ್ಷೇತ್ರದ ಪಾಠ ನನ್ನ ಮುಂದಿನ ಜೀವನದ ತಿರುವಿಗೆ ಕಾರಣವಾಯಿತು ಎನ್ನುತ್ತಾರೆ ಯೋಗೀಶ್.
ಪ್ರಯೋಗಾತ್ಮಕ ನಾಟಕಗಳನ್ನು ಮಾಡುವುದರ ಜೊತೆ ಬೀದಿನಾಟಕ , ಕಾಲೇಜು ರಂಗ ಭೂಮಿ ತಂಡಕ್ಕೆ ತರಬೇತಿ, ವಿಭಿನ್ನ ರೀತಿಯ ನಾಟಕಗಳ ಸೃಷ್ಟಿಕರ್ತರಾಗಿರುವ ಇವರು ತಮ್ಮ ಗುರುಗಳನ್ನು ಜೀವನದ ಮಾದರಿಯನ್ನಾಗಿಸಿಕೊಂಡು ಗುರು ನುಡಿದ ದಾರಿಯಲ್ಲಿ ನಡೆಯುತ್ತಿದ್ದಾರೆ.

ರಂಗ ಕ್ಷೇತ್ರ ತಂದ ರಂಗಿನ ಬದುಕು
ವಿಭಿನ್ನ ಆಲೋಚನೆ ಮತ್ತು ದೃಷ್ಟಿಕೋನದಲ್ಲಿ ಅಭಿನಯವನ್ನು ನೋಡುವುದರ ಅವಕಾಶ ಸಂಕೇತ ತಂಡವು ಒದಗಿಸಿತು. ಗುರು ಹಿಂದಿದ್ದರೆ ಗುರಿ ಸಾಧಿಸುವುದು ಕಷ್ಟದ ವಿಷಯವಲ್ಲ ಎಂಬ  ಮಾತಿನಂತೆ 
ಗುರು ಶಿಷ್ಯರನ್ನು ಹಿಂದೆಯಿಂದ ಪ್ರೋತ್ಸಾಹಿಸಿ, ಸೋತಾಗ ಸಂತೈಸಿ ಗೆದ್ದಾಗ  ಬೆನ್ನು ತಟ್ಟುವಾಗ ಗುರು ಸ್ಥಾನಕೆ ಅರ್ಥ ಬರುವುದು. ಹಾಗೇನೇ ಯೋಗೀಶ್ ಅವರ ಜೀವನದಲ್ಲಿ ಜಗನ್ ಅವರ ಪಾತ್ರ ಅಪಾರವಾಗಿದೆ.
ಸಿನಿಮಾಕ್ಕೆ ಸ್ಕ್ರಿಪ್ಟ್ ಮತ್ತು ಸಂಭಾಷಣೆಯನ್ನು ಬರೆಯುವುದು, ಹಲವಾರು ಸಿನಿಮಾಗಳ ಚಿತ್ರೀಕರಣಕ್ಕೆ ಯೋಗೀಶ್ ಅವರನ್ನು ಕರೆದುಕೊಂಡು ಹೋಗುವುದು, ಅಭಿನಯದ ಬೆಗೆಗಿನ ಮಾಹಿತಿಯನ್ನು ಹೇಳುತ್ತಾ ಯೋಗೀಶ್ ಅವರ ಬದುಕಿನ ಮಾರ್ಗಕೆ ಬೆಳಕಾಗಿದ್ದಾರೆ. 

ಪ್ರಯತ್ನಕ್ಕೆ ತಕ್ಕ ಪ್ರತಿಫಲ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಎಂಬ ಪಾತ್ರದ ಮೂಲಕ ಕಲಾಪ್ರೇಮಿಗಳ ಮನಸ್ಸಿಗೆ ಹತ್ತಿರವಾಗಿದ್ದಾರೆ. ಕೇರಳದ ಏಡ್ಸ್ ಕಂಟ್ರೋಲ್ ಸೊಸೈಟಿ ಮಂಜೇಶ್ವರ ತಾಲೂಕು ಆಸ್ಪತ್ರೆಲ್ಲಿ ಕೌನ್ಸಿಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡು ಕೆಲಸದ ಒತ್ತಡದ ನಡುವೆ ರಂಗ ಕ್ಷೇತ್ರದಲ್ಲಿ ನಟನೆ ಕಡೆಗಿನ ಆಸಕ್ತಿಯನ್ನು ತೊರೆಯದೆ ಮುನ್ನುಗುತ್ತಿದ್ದಾರೆ. 

ಯೋಗೀಶ್ ನಾಯಕ ನಟನಾಗಿ ನಟಿಸಿದ್ದ 'ಹರೀಶ ವಯಸ್ಸು 36' ಸಿನಿಮಾ ರಾಜ್ಯಾದಾದ್ಯಂತ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮನದ ಕದವನ್ನು ತಟ್ಟಿದ್ದಾರೆ .

ಸುಕನ್ಯಾ ಎನ್. ಆರ್
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ 
ಆಳ್ವಾಸ್ ಕಾಲೇಜು ಮೂಡಬಿದಿರೆ

Latest Videos
Follow Us:
Download App:
  • android
  • ios