ಕೋಲ್ಕತಾ[ಜೂ.20]: ಮಾಜಿ ಮಿಸ್ ಇಂಡಿಯಾ ಯುನಿವರ್ಸ್, ನಟಿ ಉಶೋಶಿ ಸೇನ್‌ಗುಪ್ತಾ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿ, ನಿಂದಿಸಿದ ಪುಂಡರ ಗುಂಪಿಗೆ ಸೇರಿದ 7 ಮಂದಿಯನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಎಂದಿನಂತೆ ಕೆಲಸ ಮುಗಿಸಿಕೊಂಡು ರಾತ್ರಿ 11.40ರ ಸುಮಾರಿಗೆ ಕ್ಯಾಬ್‌ನಲ್ಲಿ ಮನೆಗೆ ಹಿಂದಿರುಗುವ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಹುಡುಗರು ಉಶೋಶಿ ಅವರನ್ನು ನಿಂದಿಸಿದ್ದಾರೆ.

ಬಳಿಕ ಕ್ಯಾಬ್ ಅನ್ನು ನಿಲ್ಲಿಸಿ ಡ್ರೈವರ್ ನನ್ನು ಹೊರಕ್ಕೆ ಎಳೆದು ಹಲ್ಲೆ ನಡೆಸಿದ್ದರು. ಅದೃಷ್ಟವಶಾತ್ ಮೈದಾನ್ ಪೊಲೀಸ್ ಠಾಣೆ ಸಿಬ್ಬಂದಿ ಸಹಾಯದಿಂದ ದುಷ್ಕರ್ಮಿಗಳಿಂದ ಬಚಾವ್ ಆದೆವು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ದೂರನ್ನೂ ದಾಖಲಿಸಲಾಗಿತ್ತು. ಜವಾಹರಲಾಲ್ ಮಾರ್ಗ ದಲ್ಲಿ ಈ ಘಟನೆ ನಡೆದಿತ್ತು.