Asianet Suvarna News Asianet Suvarna News

ಹಾಸ್ಯ​ಧಾರೆ ವೇಳೆಯೇ ಕಲಾವಿದ ಸಾವು, ನಟನೆ ಎಂದು ಸುಮ್ಮನಿದ್ದ ಪ್ರೇಕ್ಷಕರು!

ದುಬೈ​ನಲ್ಲಿ ವೇದಿಕೆ ಮೇಲೆ ಹಾಸ್ಯ ಮತ್ತು ನಟನೆ ಮಾಡುತ್ತಿದ್ದಾಗ ಹೃದಯಾಘಾತ| ಹಾಸ್ಯ​ಧಾರೆ ವೇಳೆಯೇ ಕಲಾವಿದ ಸಾವು, ನಟನೆ ಎಂದು ಸುಮ್ಮನಿದ್ದ ಪ್ರೇಕ್ಷಕರು| 

Comedian Manjunath Naidu collapses and dies on stage in Dubai Audience thinks it is part of act
Author
Bangalore, First Published Jul 22, 2019, 9:26 AM IST
  • Facebook
  • Twitter
  • Whatsapp

ದುಬೈ[ಜು.22]: ಭಾರತ ಮೂಲದ ಹಾಸ್ಯ​ನಟ ಮಂಜು​ನಾಥ್‌ ನಾಯ್ಡು (36) ದುಬೈ​ನಲ್ಲಿ ವೇದಿಕೆ ಮೇಲೆ ಹಾಸ್ಯ ಮತ್ತು ನಟನೆ ಮಾಡು​ತ್ತಲೇ ಹೃದಯ ಸ್ತಂಭ​ನ​ದಿಂದ ಸಾವಿ​ಗೀ​ಡಾದ ಘಟನೆ ಶುಕ್ರ​ವಾರ ನಡೆ​ದಿದೆ. ಆದರೆ ಇದನ್ನು ವೀಕ್ಷಿ​ಸು​ತ್ತಿದ್ದ ಸಭಿ​ಕರು ಇದೂ ಕೂಡ ನಟ​ನೆಯ ಭಾಗ ಎಂದು ಅದನ್ನು ನೋಡು​ತ್ತಲೇ ಕುಳಿ​ತಿ​ದ್ದರು.

ಕೆಲ ಹೊತ್ತಿನ ನಂತರ ನಾಯ್ಡು ಜತೆ​ಗಾ​ರರು ಹೋಗಿ ನೋಡಿ​ದಾಗ ಆಗಲೇ ಮಂಜು​ನಾಥ ಪ್ರಾಣ​ಪಕ್ಷಿ ಹಾರಿ​ಹೋ​ಗಿದ್ದು ಬೆಳಕಿಗೆ ಬಂದಿದೆ. ವೇದಿಕೆ ಮೇಲೆ ಬೆಂಚ್‌ ಮೇಲೆ ಕುಳಿತು ಹಾಸ್ಯ​ಧಾರೆ ಹರಿ​ಸು​ತ್ತಿದ್ದ ಮಂಜು​ನಾಥ್‌, ಮಾತಿನ ಮಧ್ಯೆ ತಮ್ಮ ಆರೋ​ಗ್ಯದ ಸ್ಥಿತಿ ಗಂಭೀ​ರ​ವಾ​ಗಿದೆ, ಅದರ ಬಗ್ಗೆ ತಮಗೆ ಭಯಂಕರ ಆತಂಕ​ವಿದೆ ಎಂದು ಹೇಳಿ​ಕೊ​ಳ್ಳು​ತ್ತಿ​ದ್ದರು.

ಹೀಗೆ ಹೇಳಿ​ಕೊ​ಳ್ಳು​ತ್ತಲೇ ಬೆಂಚ್‌​ನಿಂದ ನೆಲಕ್ಕೆ ಮಂಜು​ನಾಥ್‌ ಉರುಳಿದ್ದು, ಅದು ಹಾಸ್ಯದ ಭಾಗ ಎಂದೇ ತಿಳಿ​ದಿದ್ದ ಸಭಿ​ಕರಿಗೆ ನಂತ​ರ​ದಲ್ಲಿ ನೈಜತೆಯ ಅರಿ​ವಾ​ಗಿ​ದೆ.

Follow Us:
Download App:
  • android
  • ios