ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಯಾವ ಅಂಶ ಗಮನಿಸಿ ಟ್ರೋಲ್ ಮಾಡುತ್ತಾರೆ ಎಂದು ಹೇಳಲು ಅಸಾಧ್ಯ. ಈ ನಟಿ ವಿಚಾರದಲ್ಲಿಯೂ ಹಾಗೆ ಆಗಿದೆ.

ಮುಂಬೈ[ಜೂ. 05] ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಜತೆ ಭಾರತ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮೌನಿ ರಾಯ್ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಟೋಗಳು ಬಗೆಬಗೆಯ ಕಮೆಂಟ್ ಗಳಿಗೆ ಗುರಿಯಾಗುತ್ತಿದೆ.

ತಿಂಗಳಿಗೆ ಒಂದೊಂದು ತೆರನಾಗಿ ಮೌನಿ ಕಾಣಿಸಿಕೊಳ್ಳುತ್ತಾಳೆ. ಮೌನಿ ರಾಯ್ ಸಂಪೂರ್ಣ ಪ್ಲಾಸ್ಟಿಕ್ ನಿಂದ ತುಂಬಿಕೊಂಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮುಖವನ್ನೇ ಬದಲಾಯಿಸಿಕೊಂಡಿದ್ದಾರೆ ಎಂದು ಆಡಿಕೊಂಡಿದ್ದಾರೆ. 

ಎಂದೋ ಶೇರ್ ಮಾಡಿದ್ದ ನಗ್ನ ಪೋಟೋಕ್ಕೆ ಬಗೆಬಗೆಯ ಕಮೆಂಟ್!

ಭಾರತ್ ಪ್ರೀಮಿಯರ್ ಶೋ ನಲ್ಲಿ ಮೌನಿ ಕಾಣಿಸಿಕೊಂಡಿದ್ದ ರೀತಿ ಟ್ರೋಲ್ ಗೆ ಗುರಿಯಾಗಿದೆ. ನವಾಜುದ್ದೀನ್ ಸಿದ್ದಕಿ ಜತೆ ‘ಬೋಲೆ ಚುಡಿಯಾ’ ಸಿನಿಮಾವನ್ನು ಕೈ ಬಿಟ್ಟಿದ್ದಕ್ಕೂ ನಟಿ ಸುದ್ದಿಯಾಗಿದ್ದರು. ನೆಟ್ಟಿಗರು ಮೌನಿ ಅವರನ್ನು ರಾಖಿ ಸಾವಂತ್ ಅವರಿಗೆ ಹೋಲಿಕೆ ಮಾಡಿಯೂ ಕಮೆಂಟ್ ಮಾಡಿದ್ದಾರೆ.

Scroll to load tweet…
View post on Instagram