ಬೆಂಗಳೂರು[ಸೆ. 11] ಬಿಗ್ ಬಾಸ್ ಕನ್ನಡದಲ್ಲಿ ಭಾಗವಹಿಸಿದ್ದ ನಟಿಯೊಬ್ಬರು ತಮ್ಮ ಮಾವನ ವಿರುದ್ಧವೇ ಕಿರುಕುಳದ ದೂರು ನೀಡಿದ್ದಾರೆ. ಬಾಸ್ ಕನ್ನಡ ಸೀಸನ್ 3ರ ಸ್ಪರ್ಧಿ, ನಟಿ ಜಯಶ್ರೀ ಮತ್ತವರ ತಾಯಿಯನ್ನು ಸೋದರ ಮಾವ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.

ಬಿಗ್ ಬಾಸ್ ಸೀಸನ್-7; ಪ್ರಸಾರದ ಡೇಟ್ ರಿವೀಲ್ ಮಾಡಿದ ಕಿಚ್ಚ!

 ಸೋದರ ಮಾವ ಗಿರೀಶ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಮಧ್ಯರಾತ್ರಿ ಅನ್ನೋದನ್ನೂ ಲೆಕ್ಕಿಸದೆ ಮನೆಯಿಂದ ಹೊರ ಹಾಕಿದ್ದಾರೆ ಎಂದು ಇವೆಂಟ್ ಆರ್ಗನೈಸರ್ ಆಗಿರುವ ಜಯಶ್ರೀ ಆರೋಪಿಸಿದ್ದಾರೆ.

ಸದ್ಯ ಅಶೋಕನಗರದಲ್ಲಿರುವ ಅಜ್ಜಿಯ ಮನೆಯಲ್ಲಿ ಜಯಶ್ರೀ ಆಶ್ರಯ ಪಡೆದಿದ್ದಾರೆ. ಮಾವ ಗಿರೀಶ್ ವಿರುದ್ದ ದೂರು ದಾಖಲಿಸಿದ್ದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಸ್ತಿ ವಿವಾದ ಮತ್ತು ಖಾಸಗಿ ಕಾರಣಗಳೇ ಈ ಜಗಳಕ್ಕೆ ಕಾರಣ ಎನ್ನಲಾಗಿದ್ದು ಸೆಪ್ಟೆಂಬರ್ 10ರಂದು ಪ್ರಕರಣ ನಡೆದಿದೆ.