ಚಿರು ಸರ್ಜಾ ನಿಧನದ ಬೆನ್ನಲ್ಲೇ ನಟಿ ಮೇಘನಾ ರಾಜ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಗರ್ಭಿಣಿಯಾಗಿ ಪತಿ ಕಳೆದುಕೊಂಡ ನೋವಲ್ಲಿರುವ ನಟಿ ಮೇಘನಾ ಕೆಲವು ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಪತಿ ಬಗ್ಗೆ ಭಾವುಕವಾಗಿ ಬರೆದಿದ್ದರು. ಇದೀಗ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ.

ಸರಣಿ ಪೋಸ್ಟ್ ಮಾಡಿದ್ದ ಅವರು ತಮ್ಮ ಕಷ್ಟದ ಸಮಯದಲ್ಲಿ ತಮ್ಮ ಜೊತೆ ನಿಂತು, ಕಂಬನಿ ಒರೆಸಿದ ಎಲ್ಲರಿಗೂ ಮೇಘನಾ ಕೃತಜ್ಞತೆ ಹೇಳಿದ್ದಾರೆ. ವಾತ್ಸಲ್ಯ ತೋರಿದ ಅಭಿಮಾನಿಗಳನ್ನು ನೆನೆಸಿಕೊಂಡು ಭಾವುಕರಾಗಿದ್ದರು.

ನೀನು ನನ್ನೊಳಗಿದ್ದೀ ಚಿರು, I Love You: ಅಗಲಿದ ಪತಿಗೆ ಮೇಘನಾ ಪತ್ರ

ಮಗುವಿನ ನಿರೀಕ್ಷೆಯಲ್ಲಿರುವ ಮೇಘನಾ ರಾಜ್ ಪತಿ ಅಗಲಿಕೆಯಿಂದ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಕೆಲವು ದಿನಗಳ ಹಿಂದೆ ಕೆಲವು ಪೋಸ್ಟ್ ಹಾಕಿದ್ದು, ಹಾಗೆಯೇ ಇನ್‌ಸ್ಟಾದಲ್ಲಿ ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಮೇಘನಾ ರಾಜ್‌ ಸರ್ಜಾ ಎಂದು ಅವರ ಹೆಸರನ್ನು ಕಾಣಬಹುದು.

ಇನ್‌ಸ್ಟಾಗ್ರಾಂನಲ್ಲಿ ಮೇಘನಾ ಸರ್ಜಾ ಬರೆದಿರುವ ಸಾಲುಗಳು ಸೋಷಿಯಲ್‌ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿತ್ತು. ಜೂನ್‌ 17ರಂದು ಚಿರಂಜೀವಿ ಸರ್ಜಾ 11ನೇ ದಿನದ ಕಾರ್ಯ ಮಾಡಲಾಗಿತ್ತು. ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು.

ಆದರೆ, ಫೇಸ್‌ಬುಕ್ ಹಾಗೂ ಟ್ವೀಟರ್‌ನಲ್ಲಿ ಮೇಘನಾ ರಾಜ್ ಎಂದೇ ಇದೆ. ಇದೀಗ ತವರಿನಲ್ಲಿರುವ ಮೇಘನಾರನ್ನು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಸೆ ಸ್ಮಿತಾ ಹಾಗೂ ಪ್ರಥಮ್ ಭೇಟಿಯಾಗಿ ಸಾಂತ್ವಾನ ಹೇಳಿದ್ದರು. 

ಮೇಘನಾ ಚಿರುಗೆ ಬರೆದ ಪತ್ರ

ಚಿರು, ನಿನಗೆ ಏನೇನು ಹೇಳಬೇಕು ಅಂತ ಬಯಸಿದೆನೋ ಅದನ್ನೆಲ್ಲಾ ಅಕ್ಷರಗಳನ್ನು ಮೂಡಿಸಲು ತುಂಬಾ ಪ್ರಯತ್ನ ಪಟ್ಟು ಸೋತು ಹೋದೆ. ನೀನು ನನಗೆ ಏನು ಅನ್ನುವುದನ್ನು ವಿವರಿಸಲು ಯಾವ ಪದಗಳಿಗೂ ಶಕ್ತಿ ಇಲ್ಲ. ನೀನು ನನ್ನ ಗೆಳೆಯ, ನನ್ನ ಪ್ರೀತಿ, ನನ್ನ ಸಂಗಾತಿ, ನನ್ನ ಕಂದ, ನನ್ನ ವಿಶ್ವಾಸ, ನನ್ನ ಗಂಡ - ಇವೆಲ್ಲಕ್ಕಿಂತಲೂ ಹೆಚ್ಚು ನೀನು. ನೀನು ನನ್ನ ಆತ್ಮದ ಒಂದು ಭಾಗ ಚಿರು.

ಪ್ರತೀ ಸಲ ಬಾಗಿಲ ಬಳಿ ನೋಡುವಾಗಲೂ ಒಂದು ಅರ್ಥೈಸಲಾಗದ ನೋವು ನನ್ನನ್ನು ಕಾಡುತ್ತದೆ. ಯಾಕೆಂದರೆ ಅಲ್ಲಿ ನಾನು ಮನೆಗೆ ಬಂದೆ ಅಂತ ಹೇಳಲು ನೀನಿರುವುದಿಲ್ಲ. ಪ್ರತಿದಿನ ಪ್ರತಿಕ್ಷಣ ನಿನ್ನನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ ಎಂದು ನೆನೆದಾಗೆಲ್ಲಾ ಹೃದಯ ಚೂರುಚೂರಾದ ಭಾವ. ನೂರು ಸಾವು ಒಮ್ಮೆಲೇ ನಿಧನಿಧಾನವಾಗಿ ಜರುಗಿದಂತೆ, ನೋವು ಕತ್ತರಿಸಿದಂತೆ ಭಾಸವಾಗುತ್ತದೆ. ಆಮೇಲೆ ಇದ್ದಕ್ಕಿದ್ದಂತೆ ಜಾದೂ ಜರುಗುತ್ತದೆ. ನೀನು ನನ್ನ ಸುತ್ತ ಸುತ್ತುತ್ತಿರುವಂತೆ ಅನ್ನಿಸುತ್ತದೆ. ನನ್ನ ದುರ್ಬಲ ಕ್ಷಣಗಳಲ್ಲಿ ನೀನು ನನ್ನ ಕಾಯುವ ದೇವತೆಯಂತೆ ನನ್ನ ಪಕ್ಕವೇ ಇದ್ದೀಯ.

ಸಿದ್ದರಾಮಯ್ಯ ಸೊಸೆಯೊಂದಿಗೆ ಮೇಘನಾ ರಾಜ್ ಭೇಟಿ ಮಾಡಿದ ಪ್ರಥಮ್

ನೀನು ನನ್ನನ್ನು ಎಷ್ಟುಪ್ರೀತಿಸಿದೆ ಎಂದರೆ ನನ್ನನ್ನು ಒಬ್ಬಳನ್ನೇ ಯಾವತ್ತೂ ಬಿಟ್ಟುಹೋಗಲೇ ಇಲ್ಲ. ಅಲ್ವಾ? ನಮ್ಮ ಪುಟ್ಟಕಂದ ನೀನು ನನಗೆ ಕೊಟ್ಟಅಮೂಲ್ಯ ಕೊಡುಗೆ. ನಮ್ಮ ಪ್ರೇಮದ ಸಂಕೇತ. ಈ ಸಿಹಿಯಾದ ವಿಸ್ಮಯವನ್ನು ನನಗೆ ದಯಪಾಲಿಸಿದ್ದಕ್ಕೆ ನಾನು ಯಾವತ್ತಿಗೂ ನಿನಗೆ ಋುಣಿ.

ನಿನ್ನನ್ನು ಈ ಜಗತ್ತಿಗೆ ಮತ್ತೆ ವಾಪಸ್‌ ತರುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ನಿನ್ನನ್ನು ಮತ್ತೆ ಹಿಡಿದುಕೊಳ್ಳಲು ಬಯಸುತ್ತಿದ್ದೇನೆ. ಮತ್ತೆ ನಿನ್ನ ನಗುವನ್ನು ನೋಡಲು ಹಂಬಲಿಸುತ್ತಿದ್ದೇನೆ. ಕೋಣೆಯನ್ನು ಬೆಳಗುವಂತೆ ಇರುವ ನಿನ್ನ ನಿಷ್ಕಲ್ಮಶ ಮಂದಹಾಸವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದೇನೆ. ನಾನು ಇಲ್ಲಿ ನಿನಗಾಗಿ ಕಾಯುತæೕನೆ, ಬಹುಶಃ ಅಲ್ಲಿ ನೀನು ನನಗಾಗಿ ಕಾಯುತ್ತಿ ಎಂದುಕೊಳ್ಳುತ್ತೇನೆ.

ನನ್ನ ಉಸಿರು ಇರುವವರೆಗೂ ನೀನು ಜೀವಂತ.

ನೀನು ನನ್ನೊಳಗಿದ್ದಿ ಚಿರು, ಐ ಲವ್‌ ಯೂ.