ಚೆನ್ನೈ[ಫೆ.20]: ಖ್ಯಾತ ನಟ ಕಮಲ್‌ಹಾಸನ್‌ ಅಭಿನಯದ ‘ಇಂಡಿಯನ್‌ 2’ ಚಿತ್ರದ ಶೂಟಿಂಗ್‌ ವೇಳೆ ಬುಧವಾರ ಭಾರೀ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ ಸಹಾಯಕ ನಿರ್ದೇಶಕ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಚೆನ್ನೈ ಹೊರವಲಯದ ಪೂನಾಮಾಲ್ಲೀ ಎಂಬಲ್ಲಿನ ಇವಿಪಿ ಸ್ಟುಡಿಯೋದಲ್ಲಿ ಬುಧವಾರ ರಾತ್ರಿ ಶೂಟಿಂಗ್‌ ನಡೆಯುತ್ತಿದ್ದ ವೇಳೆ 150 ಅಡಿ ಎತ್ತರದ ಭಾರೀ ಗಾತ್ರದ ಕ್ರೇನ್‌ ಕುಸಿದು ಈ ದುರ್ಘಟನೆ ಸಂಭವಿಸಿದೆ.

ರಾತ್ರಿ 9.30ರ ವೇಳೆಗೆ ಶೂಟಿಂಗ್‌ ನಡೆಯುತ್ತಿದ್ದು, ಈ ವೇಳೆ ಲೈಟಿಂಗ್‌ಗೆ ಎಂದು ಬಳಸಲಾಗಿದ್ದ ಕ್ರೇನ್‌ ಏಕಾಏಕಿ ಕುಸಿದು ಬಿದ್ದ ಕಾರಣ, ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಹಾಯಕ ನಿರ್ದೇಶಕ ಕೃಷ್ಣ (35) ಹಾಗೂ ಇನ್ನಿಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕೆಲ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ವೇಳೆ ಕಮಲ್‌ಹಾಸನ್‌ ಶೂಟಿಂಗ್‌ ಸ್ಥಳದಲ್ಲೇ ಇದ್ದರು. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ.

ಶಂಕರ್‌ ನಿರ್ದೇಶನದ ಈ ಚಿತ್ರದಲ್ಲಿ ಕಮಲ್‌ಹಾಸನ್‌, ಕಾಜಲ್‌ ಅಗರ್‌ವಾಲ್‌, ರಾಕುಲ್‌ ಪ್ರೀತ್‌, ಸಿದ್ದಾಥ್‌ರ್‍, ದೆಹಲಿ ಗಣೇಶ್‌ ಮೊದಲಾದವರ ನಟಿಸುತ್ತಿದ್ದಾರೆ.